ದೇಶ

ಶಶಿಕಲಾನೇ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ, ಚುನಾವಣೆ ನಡೆದ್ರೆ ನಾವೇ ಸರ್ಕಾರ ರಚಿಸುತ್ತೇವೆ: ದಿನಕರನ್

Lingaraj Badiger
ಕೊಡಗು: ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ವಿ ಕೆ ಶಶಿಕಲಾ ಅವರೇ ಇನ್ನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ತಾನು ಉಪ ಪ್ರಧಾನ ಕಾರ್ಯದರ್ಶಿ ಎಂದು ಎಐಎಡಿಎಂಕೆ ಬಂಡಾಯ ನಾಯಕ ಟಿಟಿವಿ ದಿನಕರನ್ ಅವರು ಶನಿವಾರ ಹೇಳಿದ್ದಾರೆ.
ಇಂದು ಸುಂಟಿಕೊಪ್ಪದಲ್ಲಿರುವ ಎಐಎಡಿಎಂಕೆ ಅನರ್ಹಗೊಂಡ ಶಾಸಕರೊಂದಿಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದಿನಕರನ್, ಶಶಿಕಲಾ ಅವರೇ ಇನ್ನೂ ಎಐಎಡಿಎಂಕೆ ಶಾಸಕಿಯಾಗಿದ್ದು, ಒಂದು ವೇಳೆ ತಮಿಳುನಾಡು ವಿಧಾನಸಭೆಗೆ ಈಗ ಚುನಾವಣೆ ನಡೆದ್ರೆ ತಾವು ಸರ್ಕಾರ ರಚಿಸುವುದಾಗಿ ಹೇಳಿದ್ದಾರೆ.
ಹೊಸದಾಗಿ ಚುನಾವಣೆ ಎದುರಿಸುವಂತೆ ಪಳನಿಸ್ವಾಮಿ ನೇತೃತ್ವದ ತಮಿಳುನಾಡು ಸರ್ಕಾರಕ್ಕೆ ಸವಾಲು ಹಾಕಿರುವ ದಿನಕರನ್ ಅವರು, ತಾವು ಚುನಾವಣೆ ಎದುರಿಸಲು ಸಿದ್ಧ ಎಂದಿದ್ದಾರೆ.
ಸರ್ಕಾರದಲ್ಲಿ ನಮ್ಮ ಪರವಾದ ಇನ್ನು 10ರಿಂದ 12 ಶಾಸಕರಿಂದು ಒಂದು ಪಳನಿಸ್ವಾಮಿ ವಿಶ್ವಾಸಮತ ಯಾಚಿಸಿದರೆ ಅವರು ಸರ್ಕಾರದ ವಿರುದ್ಧ ಮತ ಚಲಾಯಿಸಲಿದ್ದಾರೆ ಎಂದು ದಿನಕರನ್ ತಿಳಿಸಿದ್ದಾರೆ.
ಎಐಎಡಿಎಂಕೆಯ 18 ಬಂಡಾಯ ಶಾಸಕರು ಕಳೆದ ಎರಡು ವಾರಗಳಿಂದ ಸುಂಟಿಕೊಪ್ಪದಲ್ಲಿರುವ ಪಡ್ಡಿಂಗ್ಟನ್ ರೆಸಾರ್ಟ್ ನಲ್ಲಿ ತಂಗಿದ್ದು, ಅವರನ್ನು ಸ್ಪೀಕರ್ ಅನರ್ಹಗೊಳಿಸಿದ್ದಾರೆ.
SCROLL FOR NEXT