ಒಸ್ಮಾನಾಬಾದ್: ಮಹಾರಾಷ್ಟ್ರದ ಒಸ್ಮಾನಾಬಾದ್ ನಲ್ಲಿ ಹುಟ್ಟಿದ ಆರೇ ನಿಮಿಷಕ್ಕೆ ಭಾವನಾ ಸಂತೋಷ್ ಜಾಧವ್ ಎಂಬ ಹೆಣ್ಣು ಮಗು ಆಧಾರ್ ಸಂಖ್ಯೆ ಪಡೆದುಕೊಂಡ ಖ್ಯಾತಿಗೆ ಪಾತ್ರವಾಗಿದೆ.
ಸೆಪ್ಟೆಂಬರ್ 24 ಭಾನುವಾರ ಒಸ್ಮಾನಾಬಾದ್ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಮಧ್ಯಾಹ್ನ 12.3ಕ್ಕೆ ಈ ಮಗು ಜನಿಸಿದ್ದು ಮಧ್ಯಾಹ್ನ 12.9ಕ್ಕೆ ಮಗುವಿನ ಅಪ್ಪ-ಅಮ್ಮ ಆನ್ ಲೈನ್ ಜನನ ಪ್ರಮಾಣಪತ್ರ ಹಾಗೂ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರದಿಂದ ಆಧಾರ್ ಸಂಖ್ಯೆಯನ್ನು ಪಡೆದುಕೊಂಡರು ಎಂದು ಜಿಲ್ಲಾಧಿಕಾರಿ ರಾಧಾಕೃಷ್ಣ ಗಾಮೆ ತಿಳಿಸಿದರು.
ಒಸ್ಮಾನಾಬಾದ್ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಲ್ಲಿ ಜನಿಸಿದ 1300 ಮಕ್ಕಳಿಗೆ ಆಧಾರ್ ನಂಬರ್ ಕೊಡಿಸಲಾಗಿದೆ ಎಂದು ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ ಏಕನಾಥ್ ಮಾಳೆ ತಿಳಿಸಿದರು.