ಲೇಖಕ ಕಂಚ ಐಲಯ್ಯ (ಸಂಗ್ರಹ ಚಿತ್ರ) 
ದೇಶ

ಸಾಹಿತಿ-ವಿಚಾರವಾದಿ ಕಂಚ ಐಲಯ್ಯ ಹತ್ಯೆ ಯತ್ನ?

ಆಂಧ್ರ ಪ್ರದೇಶದ ಖ್ಯಾತ ಚಿಂತಕ ಹಾಗೂ ಲೇಖಕ ಕಂಚ ಐಲಯ್ಯ ಅವರ ಹತ್ಯೆಗೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಲೇಖಕರು ಪೊಲೀಸ್ ದೂರು ದಾಖಲಿಸಿದ್ದಾರೆ.

ಹೈದರಾಬಾದ್: ಆಂಧ್ರ ಪ್ರದೇಶದ ಖ್ಯಾತ ಚಿಂತಕ ಹಾಗೂ ಲೇಖಕ ಕಂಚ ಐಲಯ್ಯ ಅವರ ಹತ್ಯೆಗೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಲೇಖಕರು ಪೊಲೀಸ್ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ದೂರು ದಾಖಲಿಸಿರುವ ಸಾಹಿತಿ ಐಲಯ್ಯ ಅವರು ನಾಲ್ಕು ಮಂದಿ ದುಷ್ಕರ್ಮಿಗಳು ತಮ್ಮ ಕಾರಿನ ಮೇಲೆ ದಾಳಿ ಮಾಡಿದರು. ತಪ್ಪಲಿಗಳನ್ನು ತೂರಿ ಹಲ್ಲೆಗೆ ಮುಂದಾದರು, ಅಲ್ಲದೆ ತಮ್ಮ ಹತ್ಯೆಗೆ ಯತ್ನಿ,ಸಿದರು  ಎಂದು ದೂರಿನಲ್ಲಿ ಆರೋಪಿಸಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಹೈದರಾಬಾದ್ ನ ಅಂಬೇಡ್ಕರ್ ಚೌರಸ್ತಾ ಬಳಿ ಆರ್ಯವೈಶ್ಯ ಸಮುದಾಯದ 200 ಮಂದಿ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭ ಭೂಪಾಲಪಲ್ಲಿಯಲ್ಲಿ ಸಮಾರಂಭ ಮುಗಿಸಿ ಹೈದರಾಬಾದ್‌ಗೆ  ಆಗಮಿಸುತ್ತಿದ್ದ  ಐಲಯ್ಯ ಅವರ ಕಾರನ್ನು ಪ್ರತಿಭಟನಾಕಾರರು ನೋಡಿದ್ದು, ಕೂಡಲೇ ಕಾರಿನ ಮೇಲೆ ದಾಳಿ ಮುಂದಾಗಿದ್ದಾರೆ. ಅಪಾಯದ ಮುನ್ಸೂಚನೆ ಅರಿತ ಐಲಯ್ಯ ಅವರ ಕಾರು ಚಾಲಕ ತಕ್ಷಣ ಪರಕಲ್ ಠಾಣೆಗೆ ಕಾರನ್ನು  ಕೊಂಡೊಯ್ದಿದ್ದಾನೆ ಎನ್ನಲಾಗಿದೆ.

ಠಾಣೆಯಲ್ಲಿ ಕಾಂಚ ಐಲಯ್ಯ ನಾಲ್ವರ ವಿರುದ್ಧ ದೂರು ಸಲ್ಲಿಸಿದ್ದಾರೆ. "ನನ್ನ ಕಾರಿನ ಮೇಲೆ ದಾಳಿ ಮಾಡಿ ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ" ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರತಿಭಟನಕಾರರು ಠಾಣೆಗೂ  ಹಿಂಬಾಲಿಸಿಕೊಂಡರು ಬಂದರು. ವಿಷಯ ತಿಳಿದ ದಲಿತ ಸಂಘಟನೆಗಳ ಕಾರ್ಯಕರ್ತರು ಕೂಡಾ ಸ್ಥಳಕ್ಕೆ ಧಾವಿಸಿದರು. ಉಭಯ ಸಂಘಟನೆಗಳು ಪರಸ್ಪರರ ವಿರುದ್ಧ ಘೋಷಣೆ ಕೂಗಿದಾಗ ಒಂದಷ್ಟು ಕಾಲ ಉದ್ವಿಗ್ನ ವಾತಾವರಣ  ಉಂಟಾಗಿತ್ತು.

ಆರ್ಯ ವೈಶ್ಯ ಸಮಾಜದ ಕುರಿತು ಕಂಚ ಐಲಯ್ಯ ಅವರು ಬರೆದಿರುವ "ಸಾಮಾಜಿಕ ಸ್ಮಗ್ಲರ್ಲು ಕೋಮಟೋಳ್ಳು" (ವೈಶ್ಯರು ಸಾಮಾಜಿಕ ಸ್ಮಗ್ಲರ್ ಗಳು) ಪುಸ್ತಕ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಸಾಹಿತಿ ಐಲಯ್ಯ ಅವರ ವಿರುದ್ಧ  ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ. ವಿಜಯೇಂದ್ರ

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಅಧ್ಯಕ್ಷರ ಆಯ್ಕೆ: ಮೇಜರ್ ಟ್ವಿಸ್ಟ್, ರೇಸ್ ನಿಂದ ಪಾರ್ಥಿವ್‌ ಪಟೇಲ್ ಔಟ್? 24 ಟೆಸ್ಟ್‌ ಅನುಭವದ ಮಾಜಿ ಕ್ರಿಕೆಟಿಗನ ಹೆಸರು ಮುಂಚೂಣಿಗೆ!

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!