ದೇಶ

ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಗುಡುಗು; ಸುಷ್ಮಾ ಸ್ವರಾಜ್'ರನ್ನು ಕೊಂಡಾಡಿದ ರಕ್ಷಣಾ ತಜ್ಞರು

Manjula VN
ನವದೆಹಲಿ: ವಿಶ್ವಸಂಸ್ಥೆ 72ನೇ ಮಹಾಧಿವೇಶನದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಾಡಿರುವ ಭಾಷಣವನ್ನು ರಕ್ಷಣಾ ತಜ್ಞರು ಭಾನುವಾರ ಕೊಂಡಾಡಿದ್ದಾರೆ. 
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ತಜ್ಞಣಾ ತಜ್ಞ ಪಿ.ಕೆ. ಸೆಹ್ಗಲ್ ಅವರು, ಸ್ಪಟಿಕದಂತೆ ಸ್ಪಷ್ಟ ಶೈಲಿಯಲ್ಲಿ ಸುಷ್ಮಾ ಸ್ವರಾಜ್ ಅವರು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಭಾರತವು ಬಡತನ ವಿರುದ್ಧ ಕ್ರಮ ಕೈಗೊಂಡು, ಮಾಹಿತಿ ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಬೆಳವಣಿಗೆ ಕಂಡು ಎಂಜಿನಿಯರ್ ಗಳು, ವೈದ್ಯರನ್ನು ಉತ್ಪಾದಿಸುತ್ತಿದ್ದರೆ ಪಾಕಿಸ್ತಾನ ರಾಷ್ಟ್ರ ಜಿಹಾದಿಗಳನ್ನು ಹುಟ್ಟುಹಾಕಿ ಬೆಳೆಸುತ್ತಿದೆ ಎಂದು ಸುಷ್ಮಾ ಅವರು ಹೇಳಿದ್ದಾರೆ. ಈ ಹಿಂದೆಂದೂ ಯಾರೂ ಮಾಡದ ರೀತಿಯಲ್ಲಿ ಪಾಕಿಸ್ತಾನದ ವಿರುದ್ಧ ಸುಷ್ಮಾ ಅವರು ಗುಡುಗಿದ್ದಾರೆಂದು ಹೇಳಿದ್ದಾರೆ. 
ಇದೇ ವೇಳೆ ಹವಾಮಾನ ಬದಲಾವಣೆ ಕುರಿತ ಶ್ರಮಗಳ ಕುರಿತಂತೆ ಸುಷ್ಮಾ ಅವರು ನೀಡಿದ್ದ ಹೇಳಿಕೆಯನ್ನು ಹೊಗಳಿರುವ ರಕ್ಷಣಾ ತಜ್ಞರು, ಭೂಮಿ ತಾಯಿಯನ್ನು ರಕ್ಷಣೆ ಮಾಡಲು ಇದು ಸರಿಯಾದ ಕಾಲ ಎಂಬುದನ್ನು ಸುಷ್ಮಾ ಸ್ವರಾಜ್ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. 
ಪ್ರಕೃತಿ ಹಾಗೂ ಪರಿಸರಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತೇವೆ, ಭಾರತ ಕೇವಲ ಮಾನವರಿಗಷ್ಟೇ ಅಷ್ಟೇ ಅಲ್ಲ, ಮರ-ಗಿಡ ಹಾಗೂ ಪ್ರಾಣಿಗಳಿಗೂ ಗೌರವ ನೀಡುತ್ತದೆ ಎಂಬುದು ಸುಷ್ಮಾ ಸ್ವರಾಜ್ ಅವರ ಭಾಷಣದಿಂದ ತಿಳಿಯುತ್ತದೆ. ಇದಲ್ಲದೆ, ಸುಷ್ಮಾ ಅವರ ಭಾಷಣ ಪ್ಯಾರಿಸ್ ಹವಾಮಾನ ಒಪ್ಪಂದ ತೊರೆದಿದ್ದ ಅಮೆರಿಕಾ ರಾಷ್ಟ್ರಕ್ಕೂ ಪರೋಕ್ಷವಾಗಿ ತಿರುಗೇಟು ನೀಡಿದಂತಾಗಿದೆ ಎಂದಿದ್ದಾರೆ. 
SCROLL FOR NEXT