ಜೆ ಜಯಲಲಿತಾ 
ದೇಶ

ಜಯಲಲಿತಾ ಸಾವು ತನಿಖೆಗೆ ವಿಚಾರಣಾ ಆಯೋಗ ರಚಿಸಿದ ತಮಿಳುನಾಡು ಸರ್ಕಾರ!

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು ಮೃತಪಟ್ಟು 10 ತಿಂಗಳ ನಂತರ ಅವರ ಸಾವಿನ ಕುರಿತ ತನಿಖೆಗೆ ವಿಚಾರಣಾ ಆಯೋಗ ತಮಿಳುನಾಡು...

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು ಮೃತಪಟ್ಟು 10 ತಿಂಗಳ ನಂತರ ಅವರ ಸಾವಿನ ಕುರಿತ ತನಿಖೆಗೆ ವಿಚಾರಣಾ ಆಯೋಗ ತಮಿಳುನಾಡು ಸರ್ಕಾರ ರಚಿಸಿದೆ.
ಮದ್ರಾಸ್ ಹೈಕೋರ್ಟ್ ನ ನಿವೃತ್ತ ನ್ಯಾಯಾಮೂರ್ತಿ ಆರುಮುಗ ಸ್ವಾಮಿ ನೇತೃತ್ವದಲ್ಲಿ ವಿಚಾರಣೆ ಆಯೋಗದ ರಚಿಸಿರುವ ಸರ್ಕಾರ ಜೆ ಜಯಲಲಿತಾ ಅವರ ಸಾವಿನ ಕುರಿತಾದ ಸಮಗ್ರ ವರದಿಯನ್ನು ನೀಡುವಂತೆ ಸರ್ಕಾರ ಹೇಳಿದೆ. 
ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಆಗಸ್ಟ್ 17ರಂದು ವಿಚಾರಣೆ ಆಯೋಗವನ್ನು ರಚಿಸುವುದಾಗಿ ಘೋಷಿಸಿದ್ದರು. ಅಂತೆ ಇಂದು ನ್ಯಾಯಮೂರ್ತಿ ಆರುಮುಗಸ್ವಾಮಿ ಅವರನ್ನೊಳಗೊಂಡ ವಿಚಾರಣೆ ಆಯೋಗವನ್ನು ಸರ್ಕಾರ ರಚಿಸಿದೆ. 
ಹೃದಯ ಸ್ತಂಭನ ಸಮಸ್ಯೆಗೆ ಒಳಗಾಗಿದ್ದ ಜಯಲಲಿತಾ ಅವರು 75 ದಿನಗಳ ಕಾಲ ಸಾವು ಬದುಕಿನ ಹೋರಾಟ ನಡೆಸಿ ಡಿಸೆಂಬರ್ 5ರಂದು ಮೃತಪಟ್ಟಿದ್ದರು. 
ಜಯಲಲಿತಾ ಸಾವಿನ ಪ್ರಕರಣ ತನಿಖೆ ಮಾಡಬೇಕು ಎಂದು ಬಂಡಾಯ ನಾಯಕರು ಹಾಗೂ ಉಪ ಮುಖ್ಯಮಂತ್ರಿ ಓ. ಪನ್ನೀರು ಸೆಲ್ವಂ ಅವರು ಆಗ್ರಹಿಸಿದ್ದರು.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅನಕ್ಷರಸ್ಥ' ಪ್ರಧಾನಿಯಿಂದಾಗಿ ಪೆಟ್ರೋಲ್-ಡೀಸೆಲ್ ಮತ್ತು ಅನಿಲ ಬೆಲೆಗಳು ಹೆಚ್ಚಳವಾಗಿದೆ: ಸಿಎಂ ಸಿದ್ದರಾಮಯ್ಯ

IPL Valuation Chart: 1.63 ಲಕ್ಷ ಕೋಟಿಗೇರಿದ ಐಪಿಎಲ್ ಮೌಲ್ಯ, CSK ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ KKR, 'ಕಿಂಗ್' ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು ಗೊತ್ತಾ?

ಬೋಗಸ್ ದಾಖಲೆ ಸೃಷ್ಟಿಸಿ 23 ಕೋಟಿ ರೂ ಲೂಟಿ; ಬೆಳಗಾವಿ ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿದ 8 ಕಡೆ ಲೋಕಾಯುಕ್ತ ದಾಳಿ!

ವಚನಾನಂದಶ್ರೀ ವಿರುದ್ಧದ Pocso ಪ್ರಕರಣ: ತನಿಖಾಧಿಕಾರಿ PSI ಮಂಜುಳಾ ದಿಢೀರ್ ವರ್ಗಾವಣೆ!

ಮಾನವೀಯತೆ ಮರೆತ ಜನ: ಜನನಿಬಿಡ ರಸ್ತೆಯಲ್ಲೇ ಯುವ ದಂಪತಿ ಮೇಲೆ ಭೀಕರ ಹಲ್ಲೆ; Video Viral ಆದ ನಂತರ ಆಕ್ರೋಶ!

SCROLL FOR NEXT