ದೇಶ

ಚೋಟಾ ಶಕೀಲ್ ಹೆಸರಿಗೆ ಮೋದಿ, ದೆಹಲಿ ಬದಲಿಗೆ ಕಲಾಚಿ: ಭೂಗತ ಪಾತಕಿ ದಾವುದ್ ಹೊಸ ಕೋಡ್'ವರ್ಡ್ ಬಹಿರಂಗ

Manjula VN
ಮುಂಬೈ: ಭೂಗತ ಪಾತಕಿ ದಾವೂದ್ ಸಹೋದರ ಇಕ್ಬಾಲ್ ಕಸ್ಕರ್ ಬಂಧನದ ಬಳಿಕ ಡಿ-ಕಂಪನಿ ಕುರಿತಂತೆ ಹಲವಾರು ಸ್ಫೋಟಕ ಮಾಹಿತಿಗಳು ಬಹಿರಂಗಗೊಳ್ಳುತ್ತಿದೆ. 
ಈ ವರೆಗೂ ದಾವೂದ್ ಕುರಿತಂತೆ ಬದುಕಿರುವ ಬಗ್ಗೆ ಹಾಗೂ ಆತನ ಚಟುವಟಿಕೆಗೆ, ಆರೋಗ್ಯ ಕುರಿತಂತೆ ಮಾಹಿತಿ ನೀಡಿದ್ದ ಕಸ್ಕರ್ ಇದೀಗ ದಾವೂದ್'ನ ಡಿ-ಕಂಪನಿ ವ್ಯವಹಾರಗಳ ಕುರಿತಂತೆ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ. 
ಡಿ-ಕಂಪನಿ ತನ್ನ ವ್ಯವಹಾರಗಳನ್ನು ನಡೆಯಲು ಹಲವು ಕೋಡ್ ವರ್ಡ್ ಗಳನ್ನು ಬಳಕೆ ಮಾಡುತ್ತಿದ್ದು. ಅದರಲ್ಲಿ ಭಾರತದ ಮತ್ತೊಬ್ಬ ಗ್ಯಾಂಗ್ ಸ್ಟರ್ ಚೋಟಾ ಶಕೀಲ್ ಹೆಸಿನ ಬದಲಿಗೆ ಮೋದಿ ಹೆಸರನ್ನು ಹಾಗೂ ಕರಾಚಿ ಹೆಸರಿನ ಬದಲಾಗಿ ದೆಹಲಿ ಎಂಬ ಕೋಡ್ ವರ್ಡ್ ಬಳಸುತ್ತಿದ್ದ ಎಂದು ಕಸ್ಕರ್ ಹೇಳಿಕೊಂಡಿದ್ದಾರೆ. 
ಖಾಸಗಿ ಮಾಧ್ಯಮದ ವರದಿ ಪ್ರಕಾರ ಡಿ-ಕಂಪನಿಯ ಮುಖ್ಯಸ್ಥ ದಾವೂದ್ ಹೆಸರಿಗೆ 'ಬಡೆ' ಎಂಬ ಕೋಡ್ ನೀಡಲಾಗಿದ್ದು, ಪೊಲೀಸ್ ವ್ಯಾನ್'ಗೆ ಡಬ್ಬ ಎಂದು ಕೋಡ್ ಬಳಸಲಾಗುತ್ತಿದೆ. 
ರೂ.1 ಲಕ್ಷ ಸೂಚಿಸಲು ಬಳಸುತ್ತಿದ್ದ 'ಏಕ್ ಡಬ್ಬ' ಕೋಡ್ ಬದಲಿಗೆ 'ಏಕ್ ಪೇಟಿ' ಎಂಬ ಹೊಸ ಕೋಡ್ ನೀಡಲಾಗಿದ್ದು, ಹಾಗೆಯೇ ರೂ.1 ಕೋಟಿಗೆ ಇದ್ದ ಏಕ್ ಕೋಕಾ' ಕೋಡ್ ಬದಲಿಗೆ 'ಏಕ್ ಬಾಕ್ಸ್' ಎಂಬ ಕೋಡ್ ಪದಗಳನ್ನು ಬಳಸಲಾಗುತ್ತಿದೆ ಎಂದು ತಿಳಿಸಿದ್ದಾನೆ. 
ದಾವೂದ್ ಇಬ್ರಾಹಿಂ ಡಿ-ಕಂಪನಿಯು ಈ ಕೋಡ್ ಗಳನ್ನು ತನ್ನ ಕ್ರಿಮಿನಲ್ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದೆ ಎಂದಿರುವ ಕಸ್ಕರ್, ತನ್ನ ಸದೋಹರರಾದ ದಾವೂದ್ ಮತ್ತು ಅನೀಸ್ ಇಬ್ರಾಹಿಂ ಇಬ್ಬರೂ ಪಾಕಿಸ್ತಾನದಲ್ಲಿಯೇ ನೆಲೆಸಿದ್ದಾರೆ. ಗುಪ್ತಚರ ಸಂಸ್ಥೆಗಳ ಕಣ್ಣು ತಪ್ಪಿಸುವ ಸಲುವಾಗಿ ಇಬ್ಬರೂ ದುಬೈಗೆ ಪ್ರಯಾಣ ಮಾಡುವಾಗ ಯಾವುದೇ ದಾಖಲೆಗಳನ್ನು ಬಳಸುವುದಿಲ್ಲ ಎಂದು ಹೇಳಿಕೊಂಡಿದ್ದಾನೆ.
ಹಣ ಸುಲಿಗೆ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವೂದ್ ಸಹೋದರ ಕಸ್ಕರ್ ನನ್ನು ಮುಂಬೈ ಪೊಲೀಸರು ಸೆ.23 ರಂದು ಬಂಧನಕ್ಕೊಳಪಡಿಸಿದ್ದರು. ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ಹಾಗೂ ಮುಂಬೈ ಠಾಣೆ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಗಳು ಕಸ್ಕರ್ ನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. 
SCROLL FOR NEXT