ದೇಶ

ಗೋವುಗಳ ರಕ್ಷಣೆಗೆ ಮುಸ್ಲಿಮರು ಕೂಡ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ: ಮೋಹನ್ ಭಾಗವತ್

Shilpa D
ಮುಂಬಯಿ: ಹಸುಗಳ ರಕ್ಷಣೆ ಮಾಡುವುದು ಸಂವಿಧಾನದಲ್ಲೇ ಉಲ್ಲೇಖವಾಗಿದೆ, ಅದು ಯಾವುದೇ ಧರ್ಮದ ವಿಷಯವಲ್ಲ, ಎಷ್ಟು ಮಂದಿ ಮುಸ್ಲಿಮರು ಗೋವುಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ನನಗೆ ತಿಳಿದಿದೆ. ಹಲವು ಮುಸ್ಲಿಮರು ಗೋವುಗಳ ರಕ್ಷಣೆಗೆ ತಮ್ಮ ಪ್ರಾಣ ನೀಡಿದ್ದಾರೆ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮುಂಬಯಿಯಲ್ಲಿ, ವಿಜಯ ದಶಮಿ ಅಂಗವಾಗಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಗೋರಕ್ಷಕರು ಯಾವುದೇ ಕಾರಣಕ್ಕೂ ಕಾನೂನನ್ನು ಉಲ್ಲಂಘಿಸಬಾರದು, ಹಾಗೆಯೇ ಜನಗಳು ಧರ್ಮವನ್ನು ಪರಿಗಣಿಸದೇ ಗೋವುಗಳನ್ನು ರಕ್ಷಿಸಬೇಕು ಎಂದು ಕರೆ ನೀಡಿದ್ದಾರೆ.
ಗೋರಕ್ಷಣೆ ಮಾಡುವಾಗ ಹಲವು ಜನರನ್ನು ಗೋರಕ್ಷಕರು ಕೊಂದಿರುವುದು ಖಂಡನೀಯ ಹಾಗೆಯೇ, ಹಸು ಕಳ್ಳ ಸಾಗಣೆದಾರರಿಂದ ಹಲವರು ಸಾವನ್ನಪ್ಪಿದ್ದಾರೆ, ಧರ್ಮವನ್ನು ಮೀರಿ ನಾವು ಹಸುಗಳ ರಕ್ಷಣೆ ಮಾಡಬೇಕು ಎಂದು ಹೇಳಿದ್ದಾರೆ.
ದೇಶದಲ್ಲಿ ಹಸುಗಳನ್ನು ಹಾಲು ಮತ್ತು ಅದರ ಮೂತ್ರಕ್ಕೆ ಬಳಸಲಾಗುತ್ತದೆ. ಸಣ್ಣ  ರೈತರು ತಮ್ಮ ಜೀವನೋಪಾಯಕ್ಕಾಗಿ ಹಸು ಸಾಕುತ್ತಾರೆ, ಹಸುಗಳ ರಕ್ಷಣೆ ಹಾಗೂ ಹಸು ಆಧಾರಿತ ಕೃಷಿಯನ್ನು ಸಂರಕ್ಷಿಸಬೇಕೆಂದು ಸಂವಿಧಾನದಲ್ಲೇ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
SCROLL FOR NEXT