ದೇಶ

ಹಿಂದೂಗಳು ಜಾತ್ಯಾತೀತರಾಗಿರುವುದರಿಂದ ಭಾರತ ಜಾತ್ಯಾತೀತ ರಾಷ್ಟ್ರವಾಗಿದೆ: ಖುರೇಷಿ

Srinivas Rao BV
ನವದೆಹಲಿ: ಹಿಂದೂಗಳು ನಿಜಜ್ವಾದ ಜಾತ್ಯಾತೀತರಾಗಿದ್ದು, ಮುಸ್ಲಿಮರು ಬೇರೆ ರಾಷ್ಟ್ರಗಳಿಗಿಂತ ಭಾರತದಲ್ಲಿ ಹೆಚ್ಚು ಸುರಕ್ಷಿತರಾಗಿದ್ದಾರೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ ಖುರೇಷಿ ಹೇಳಿದ್ದಾರೆ. 
ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವುದು ಸತ್ಯ. ಕೋಮು ದೃವೀಕರಣದ ಪ್ರಯತ್ನ ನಡೆಯುವವರೆಗೂ ಈ ಅಸಹಿಷ್ಣುತೆಯನ್ನು ಕೊನೆಗಾಣಿಸಲು ಸಾಧ್ಯವಾಗುವುದಿಲ್ಲ ಎಂದು ಖುರೇಷಿ ಅಭಿಪ್ರಾಯಪಟ್ಟಿದ್ದಾರೆ. ಹೌದು, ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ, ಅದೂ 5-10 ವರ್ಷಗಳಿಂದ ಹೆಚ್ಚಾಗುತ್ತಿದೆ ಓಟ್ ಬ್ಯಾಂಕ್ ರಾಜಕಾರಣದಿಂದ ಈ ರೀತಿಯಾಗುತ್ತಿದೆ ಎಂದು ಖುರೇಷಿ ಅಭಿಪ್ರಾಯಪಟ್ಟಿದ್ದಾರೆ. 
ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಗೆ ಓಟ್ ಬ್ಯಾಂಕ್ ರಾಜಕಾರಣವೇ ಕಾರಣವಾಗಿದೆ, ಭಾರತ ಜಾತ್ಯಾತೀತ ರಾಷ್ಟ್ರ ಎಂಬುದರಲ್ಲಿ ಅನುಮಾನವಿಲ್ಲ ಏಕೆಂದರೆ ಹಿಂದೂಗಳು ಜಾತ್ಯಾತೀತರಾಗಿದ್ದಾರೆ. ಹಿಂದೂಗಳ ಸಂಸ್ಕೃತಿಯೇ ಜಾತ್ಯಾತೀತವಾದದ್ದು ಅದೇ ಭಾರತದ ಮೂಲಭೂತ ಲಕ್ಷಣವೂ ಆಗಿದೆ ಎಂದು ಖುರೇಷಿ ಹೇಳಿದ್ದಾರೆ.
SCROLL FOR NEXT