ಹೈದರಾಬಾದ್‍ನಲ್ಲಿ ಭೀಕರ ಅಪಘಾತ: ಟ್ರಕ್‌ಗೆ ಬಸ್ ಡಿಕ್ಕಿ 6 ಸಾವು, 16 ಗಾಯ
ಟ್ರಕ್ ಗೆ ಸರ್ಕಾರಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಪ್ರಮಾಣಿಕರು ಮೃತಪಟ್ಟಿದ್ದು 16 ಮಂದಿ ಗಾಯಗೊಂಡಿರುವ ಘಟನೆ ತೆಲಂಗಾಣದ...
ಹೈದರಾಬಾದ್: ಟ್ರಕ್ ಗೆ ಸರ್ಕಾರಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಪ್ರಮಾಣಿಕರು ಮೃತಪಟ್ಟಿದ್ದು 16 ಮಂದಿ ಗಾಯಗೊಂಡಿರುವ ಘಟನೆ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯಲ್ಲಿ ಸಂಭವಿಸಿದೆ.
ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಆಂಧ್ರಪ್ರದೇಶ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ವಿಜಯವಾಡದಿಂದ ಹೈದರಾಬಾದ್ ಕಡೆ ಪ್ರಮಾಣಿಸುತ್ತಿತ್ತು ಈ ವೇಳೆ ಇಲ್ಲಿನ ಸೂರ್ಯಪೇಟ್ ಜಿಲ್ಲೆಯ ಮುದ್ದುಲಚೇರುವು ಬಳಿ ಟ್ರಕ್ ವೊಂದನ್ನು ಬಸ್ ಚಾಲಕ ಓವರ್ ಟೇಕ್ ಮಾಡಲು ಮುಂದಾದಾಗ ಅಪಘಾತ ಸಂಭವಿಸಿದೆ.
ಬಸ್ ನಲ್ಲಿ 36 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದು ಇದರಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು 16 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಕೋದಾಡ್ ಹಾಗೂ ಸೂರ್ಯ ಪೇಟ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.