ಭಾರತ್ ಬಂದ್ ಪ್ರತಿಭಟನೆಯ ಚಿತ್ರ 
ದೇಶ

ಎಸ್‏ಸಿ/ಎಸ್‏ಟಿ ಕಾಯ್ದೆ ಸಂಬಂಧ ಭಾರತ್ ಬಂದ್: ಭಾರತದಾದ್ಯಂತ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 8 ಜನರ ಸಾವು

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ದೇಶಾದ್ಯಂತ ವಿವಿಧ ದಲಿತ ಪರ...

ನವದೆಹಲಿ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ದೇಶಾದ್ಯಂತ ವಿವಿಧ ದಲಿತ ಪರ ಸಂಘಟನೆಗಳು ಇಂದು ನಡೆಸುತ್ತಿರುವ ಭಾರತ್ ಬಂದ್ ಪ್ರತಿಭಟನೆ ಕೆಲವೆಡೆ ಹಿಂಸಾಚಾರಕ್ಕೆ ತಿರುಗಿದ್ದು ದೇಶಾದ್ಯಂತ 8 ಮಂದಿ ಮೃತಪಟ್ಟಿದ್ದಾರೆ.

ಮಧ್ಯಪ್ರದೇಶದ ಗ್ವಾಲಿಯರ್ ಹಾಗೂ ಮೊರೇನಾದಲ್ಲಿ ಸಂಭವಿಸಿದ್ದ ಹಿಂಸಾಚಾರದಲ್ಲಿ ಐವರು ಸಾವಿಗೀಡಾಗಿದ್ದಾರೆ. ರಾಜಸ್ತಾನ ಮತ್ತು ಉತ್ತರಪ್ರದೇಶದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನು ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ನಾಲ್ಕು ರಾಜ್ಯಗಳಿಗೆ ಸೇನಾ ಪಡೆ ಯೋಧರನ್ನು ಕಳುಹಿಸಲಾಗಿದೆ.

ಗ್ವಾಲಿಯರ್ ನಲ್ಲಿ 19 ಮಂದಿ ಪ್ರತಿಭಟನಾಕಾರರು ಗಾಯಗೊಂಡಿದ್ದು, ಅವರ ಪೈಕಿ ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ. ಇಲ್ಲಿ  ಬೆಳಿಗ್ಗೆ 6 ಗಂಟೆಯವರೆಗೂ ಇಂಟರ್ ನೆಟ್ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ.ಮೊರೆನಾದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಜೈಪುರದಲ್ಲಿಯೂ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಾಜಸ್ತಾನದ ಕೆಲವು ಕಡೆ  ರೈಲು, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೊಳಿಸಲಾಗಿದೆ. 30ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಒಡಿಶಾದಲ್ಲಿ ಪ್ರತಿಭಟನೆಯಿಂದ ಜನಜೀವನ ಭಾಗಶ ; ದುಸ್ತರವಾಗಿದೆ ಜಾರ್ಸುಗುಂಡ,  ಸುಂದರ್ ಘರ್, ಮಾಲ್ಕಾಂಗಿರಿ, ಸಾಂಬಾಲ್ ಪುರ್ ಮತ್ತಿತರ ಬುಡಕಟ್ಟು ಜನರು ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿದ್ದು, ಬಸ್ ಸಂಚಾರ ಎಂದಿನಂತೆ ಸಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯಲ್ಲಿಯೂ ನೂರಾರು ಮಂದಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದು, ಸದ್ಯ, ಸಂಚಾರ ದಟ್ಟಣೆ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಮಂಡಿ ಹೌಸ್ ಬಳಿ ರಸ್ತೆ ತಡೆ ನಡೆಸಿದ್ದರಿಂದ ಐಟಿಓ ಮತ್ತಿತರ ಪ್ರದೇಶಗಳ ಕಡೆಗೆ ತೆರಳುತ್ತಿದ್ದ ಪ್ರಯಾಣಿಕರು ತೀವ್ರ ರೀತಿಯ ತೊಂದರೆ ಎದುರಿಸುವಂತಾಯಿತು.

ಎಸ್'ಟಿ/ಎಸ್'ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣಗಳನ್ನು ತಕ್ಷಣವೇ ದಾಖಲಿಸಬೇಕು ಮತ್ತು ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕೆಂಬ ನಿಯಮವನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಇತ್ತೀಚೆಗಷ್ಟೇ ತೀರ್ಪೊಂದನ್ನು ನೀಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಾಸಕರ ಖರೀದಿ ನಡೆಯುತ್ತಿದೆ; ಆದ್ರೆ ಕಾಂಗ್ರೆಸ್‌ನಿಂದ ಹೊರಬರುವವರ ಜತೆ ಸರ್ಕಾರ ರಚಿಸಲ್ಲ: ಪ್ರಹ್ಲಾದ್ ಜೋಶಿ

ಬೆಂಗಳೂರು ಎಟಿಎಂ ವ್ಯಾನ್ ದರೋಡೆ: 54 ಗಂಟೆಗಳಲ್ಲಿ ಮೂವರ ಬಂಧನ; 5.76 ಕೋಟಿ ಹಣ ವಶ; ತನಿಖೆಗೆ 11 ತಂಡ ರಚನೆ

ತಿಮ್ಮಪ್ಪನ ಭಕ್ತರಿಗೆ ಶಾಕ್: 'ಕಲಬೆರಕೆ ವಿವಾದ ನಡುವೆಯೂ 5 ವರ್ಷದಲ್ಲಿ ನಕಲಿ ತುಪ್ಪದಿಂದ ತಯಾರಿಸಿದ 20 ಕೋಟಿ ಲಡ್ಡು ವಿತರಣೆ': TTD ಅಧಿಕಾರಿ

G20 Summit: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆಗೆ ಪ್ರಧಾನಿ ಮೋದಿಯ ಆತ್ಮೀಯತೆ! Video ವೈರಲ್

CJI ಬಿಆರ್ ಗವಾಯಿ ಅಧಿಕಾರವಧಿಯಲ್ಲಿ ದಲಿತರಿಗೆ ಮಣೆ ಹಾಕಿದ್ರಾ? ನೇಮಕವಾದ SC,OBC ಜಡ್ಜ್ ಗಳ ಸಂಖ್ಯೆ ಎಷ್ಟು ಗೊತ್ತಾ?

SCROLL FOR NEXT