ಮೀರತ್: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಕುರಿತ ಭಾರತ್ ಬಂದ್ ವೇಳೆ ಮೀರತ್ ನಲ್ಲಿ ಹಿಂಸಾಚಾರಕ್ಕೆ ಉತ್ತೇಜನ ನೀಡಿದ ಆರೋಪದಡಿ ಬಹುಜನ ಸಮಾಜವಾದಿ ಪಕ್ಷದ ಮಾಜಿ ಶಾಸಕನನ್ನು ಬಂಧಿಸಲಾಗಿದೆ.
ಯೋಗೇಶ್ ವರ್ಮಾ ಬಂಧಿತ ಮಾಜಿ ಶಾಸಕನಾಗಿದ್ದು, ಮೀರತ್ ನಲ್ಲಿ ಹಿಂಸಾಚಾರ ಹೆಚ್ಚುವುದಕ್ಕೆ ಯೋಗೇಶ್ ವರ್ಮಾ ಮುಖ್ಯವಾಗಿ ಕಾರಣರಾಗಿದ್ದಾರೆ. ಆದ್ದರಿಂದ ಅವರನ್ನು ಬಂಧಿಸಲಾಗಿದೆ ಎಂದು ಎಸ್ಎಸ್ ಪಿ ಹೇಳಿದ್ದಾರೆ. ಹಿಂಸಾಚಾರದಲ್ಲಿ 200 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದ್ದು, ಎಲ್ಲರ ವಿರುದ್ಧವೂ ಪ್ರಕರಣದ ದಾಖಲಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಂದ್ ವೇಳೆ ನಡೆದ ಹಿಂಸಾಚಾರವನ್ನು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಖಂಡಿಸಿದ್ದು, ಸಮಾಜ ಘಾತುಕ ಶಕ್ತಿಗಳನ್ನು ಹಿಂಸಾಚಾರ ಉಂಟುಮಾಡಲೆಂದೇ ಕಳಿಸಲಾಗಿತ್ತು ಎಂದು ಹೇಳಿದ್ದಾರೆ.