ದೇಶ

ಲೆಫ್ಟಿನೆಂಟ್ ಗವರ್ನರ್ ಪಡಿತರ ಮಾಫಿಯಾ ರಕ್ಷಿಸುತ್ತಿದ್ದಾರೆ: ದೆಹಲಿ ಸಿಎಂ ಆರೋಪ

Lingaraj Badiger
ನವದೆಹಲಿ: ಸಿಎಜೆ ವರದಿಯನ್ನು ಉಲ್ಲೇಖಿಸಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಲೆಫ್ಟಿನೆಂಟ್ ಗವರ್ನರ್ ಪಡಿತರ ಮಾಫಿಯಾ ರಕ್ಷಣೆಗೆ ನಿಂತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಲೋಪದೋಷಗಳಿವೆ ಎಂದು ಸಿಎಜಿ ವರದಿ ನೀಡಿದ್ದು, ಅದನ್ನು ಇಂದು ದೆಹಲಿ ವಿಧಾನಸಭೆಯಲ್ಲಿ ಮಂಡಿಸಿದ ಮಾತನಾಡಿದ ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಸಹ ಅನಿಲ್ ಬೈಜಾಲ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪುರಸಭೆ ರಸ್ತೆಗಳ ನಿರ್ವಹಣೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪದೋಷಗಳಿವೆ ಸಿಎಜಿ ವರದಿ ತಿಳಿಸಿರುವುದಾಗಿ ಎಂದು ಸಿಸೋಡಿಯಾ ವಿಧಾನಸಭೆಗೆ ಮಾಹಿತಿ ನೀಡಿದರು.
ಇನ್ನು ಈ ಕುರಿತು ಟ್ವೀಟ್ ಮಾಡಿದ ಸಿಎಂ ಕೇಜ್ರಿವಾಲ್, ಲೆಫ್ಟಿನೆಂಟ್ ಗವರ್ನರ್ ಪಡಿತರವನ್ನು ಮನೆ ಬಾಗಿಲಿಗೆ ವಿತರಿಸುವ ಪ್ರಸ್ತಾವನ್ನೆ ತಿರಸ್ಕರಿಸುವ ಮೂಲಕ ಪಡಿತರ ಮಾಫಿಯಾವನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜಕೀಯ ನೇತಾರರ ಹಿಡಿತದಲ್ಲಿರುವ ಮಾಫಿಯಾವೊಂದು ಸಂಪೂರ್ಣ ಪಡಿತರ ವ್ಯವಸ್ಥೆಯನ್ನೇ ನಿರ್ವಹಿಸುತ್ತಿದೆ. ಮನೆ ಬಾಗಿಲಿಗೆ ವಿತರಿಸುವ ಯೋಜನೆ ಈ ಮಾಫಿಯಾಗೆ ಕಡಿವಾಣ ಹಾಕುತ್ತಿತ್ತು ಎಂದು ದೆಹಲಿ ಸಿಎಂ ಟ್ವೀಟ್ ಮಾಡಿದ್ದಾರೆ.
SCROLL FOR NEXT