ದೇಶ

ಒಬ್ಬ ಅಭ್ಯರ್ಥಿ ಒಂದೇ ಕ್ಷೇತ್ರದಿಂದ ಸ್ಪರ್ಧೆ ನೀತಿಗೆ ಚುನಾವಣಾ ಆಯೋಗ ಬೆಂಬಲ

Raghavendra Adiga
ನವದೆಹಲಿ: ಓರ್ವ ಅಭ್ಯರ್ಥಿ ಒಂದೇ ಕ್ಷೇತ್ರ ನಿಯಮವನ್ನು ಚುನಾವಣಾ ಆಯೋಗ ಬೆಂಬಲಿಸುತ್ತದೆ ಎಂದು ಆಯೋಗವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಪ್ರಸ್ತುತ ಓರ್ವ ಅಭ್ಯರ್ಥಿಯು ಗರಿಷ್ಠ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಬಹುದಾಗಿದೆ.
ಆದರೆ ಚುನಾವಣೆಗೆ ನಿಲ್ಲುವ ಓರ್ವ ಅಭ್ಯರ್ಥಿ ಒಂದೇ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಪಿಐಎಲ್ ಗೆ ಬೆಂಬಲ ವ್ಯಕ್ತಪಡಿಸಿ ಆಯೋಗವು ನ್ಯಾಯಾಲಯಕ್ಕೆ ಅಫಿಡವಿಟ್  ಸಲ್ಲಿಸಿದೆ.
ಓರ್ವ ಅಭ್ಯರ್ಥಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡೂ ಕ್ಷೇತ್ರಗಳಲ್ಲಿ ಜಯಿಸಿದರೆ ಊಂದು ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಸಬೇಕಾಗುವುದು. ಆ ಖರ್ಚು ಚುನಾಯಿತ ಸರ್ಕಾರದ ಹೆಗಲಿಗೆ ಬರಲಿದೆ. ಇದಕ್ಕಾಗಿ ಓರ್ವ ಅಭ್ಯರ್ಥಿ, ಒಂದು ಕ್ಷೇತ್ರ ಎನ್ನುವ ನೀತಿ ಜಾರಿಯಾಗಬೇಕು ಎಂದು ಕೋರಿ ಬಿಜೆಪಿ ನಾಯಕ , ವಕೀಲರಾದ ಅಶ್ವಿ‌ನಿ ಕುಮಾರ್‌ ಉಪಾಧ್ಯಾಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯ 2017ರ ಡಿಸೆಂಬರ್‌ನಲ್ಲಿ ಚುನಾವಣಾ ಆಯೋಗಕ್ಕೆ ನೋಟೀಸ್ ಜಾರಿ ಮಾಡಿತ್ತು. ಈ ನೋಟೀಸ್ ಗೆ ಉತ್ತರಿಸಿರುವ ಆಯೋಗ ತಾನು ಪಿಐಎಲ್ ನಲ್ಲಿರುವ ಮನವಿಗೆ ಬೆಂಬಲ ವ್ಯಕ್ತಪಡಿಸುವುದಾಗಿ ಹೇಳಿದೆ.
ಸಧ್ಯ ಈ ಪ್ರಕರಣದ ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
SCROLL FOR NEXT