ದೇಶ

ಬ್ಯಾಂಕ್ ವಂಚನೆ ಪ್ರಕರಣ: ವಡೋದರಾ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಸಿಬಿಐ

Raghavendra Adiga
ನವದೆಹಲಿ: ಗುಜರಾತ್ ವಡೋದರಾ ಮೂಲದ ವಿದ್ಯುತ್ ಕೇಬಲ್ ಮತ್ತು ಉಪಕರಣ ತಯಾರಿಕಾ ಸಂಸ್ಥೆ ದೇಶಾದ್ಯಂತ ವಿವಿಧ  ಬ್ಯಾಂಕ್ ಗಳಿಗೆ  ರೂ. 2,654 ಕೋಟಿ ವಂಚನೆ ಮಾಡಿದೆ ಎಂದು ಆರೋಪಿಸಿ ಕೇಂದ್ರೀಯ ತನಿಕಾ ದಳ (ಸಿಇಬಿಐ)  ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.
ವಡೋದರಾದ ಡೈಮಂಡ್ ಪವರ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಡಿಪಿಐಎಲ್) ಸಂಸ್ಥೆಯ ಕಚೇರಿ ಹಾಗೂ ನಿರ್ದೇಶಕರ ವಸತಿ ಆವರಣದಲ್ಲಿ ಸಿಬಿಐ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ ಎಂದು ತನಿಖಾ ಸಂಸ್ಥೆ ವಕ್ತಾರರು ಹೇಳಿದ್ದಾರೆ.
ವಿದ್ಯುತ್ ಕೇಬಲ್ ಮತ್ತು ಉಪಕರಣ ತಯಾರಿಕಾ ಸಂಸ್ಥೆ ಡಿಪಿಐಎಲ್, ಎನ್ ಎನ್ ಭಟ್ನಾಗರ್ ಮತ್ತು ಅವರ ಪುತ್ರರಾದ ಅಮಿತ್ ಭಟ್ನಾಗರ್ ಮತ್ತು ಸುಮಿತ್ ಭಟ್ನಾಗರ್ ಎನ್ನುವವರಿಗೆ ಸೇರಿದೆ. ಇವರುಗಳು ಆ ಸಂಸ್ಥೆಯ ಕಾರ್ಯನಿರ್ವಾಹಕರೂ ಆಗಿರುತ್ತಾರೆ ಎಂದು ಸಿಬಿಐ ಹೇಳಿದ್ದು 2016-17ರಲ್ಲಿಸಂಸ್ಥೆಯ ಹೆಸರಿನಲ್ಲಿ ಅನುತ್ಪಾದಕ ಸಾಲಗಳನ್ನು ಪಡೆಯಲಾಗಿದೆ ಎಂದು ತನಿಖಾ ದಳ ಆರೋಪಿಸಿದೆ.
"ಡಿಪಿಐಎಲ್, 2008 ರಿಂದ ದೇಶದ 11 ಬ್ಯಾಂಕುಗಳ ಒಕ್ಕೂಟದಿಂದ((ಸಾರ್ವಜನಿಕ ಮತ್ತು ಖಾಸಗಿ)  ನಕಲಿ ದಾಖಲೆಗಳನ್ನು ಬಳ್ಸಿ ಸಾಲ ಪಡೆದಿತ್ತು. 016 ರ ಜೂನ್ 29ಕ್ಕೆ ಈ ಅನುತ್ಪಾದಕ ಸಾಲದ ಮೊತ್ತವು 2,654. 40ಕೋಟಿ ರೂ. ಆಗಿತ್ತು" ಸಿಬಿಐ ಹೇಳಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಮತ್ತು ಎಕ್ಸ್ಪೋರ್ಟ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ (ಇಸಿಜಿಸಿ) ಈ ಸಂಸ್ಥೆಯನ್ನು ಇದಾಗಲೇ ಸುಸ್ಥಿದಾರರ  ಪಟ್ಟಿಗೆ ಸೇರಿಸಿದ್ದರೂ ಸಹ  ಕಂಪೆನಿ ಮತ್ತು ಅದರ ನಿರ್ದೇಶಕರು ಹೊಸ ಸಾಲವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.  2008 ರಲ್ಲಿ ಕನ್ಸೋರ್ಟಿಯಂನ ಸ್ಥಾಪನೆ ಸಮಯದಲ್ಲಿ  ಆಕ್ಸಿಸ್ ಬ್ಯಾಂಕ್ ನಿಂದ ಪ್ರಮುಖವಾಗಿ ಅವಧಿ ಸಾಲವನ್ನು (ಟರ್ಮ್ ಲೋನ್) ಪಡೆದಿತ್ತು, ಅಲ್ಲದೆ ಸಿಸಿ ಲಿಮಿಟ್ಸ್ ಗಾಗಿ ಬ್ಯಾಂಕ್ ಆಫ್ ಇಂಡಿಯಾವನ್ನು ಅವಲಂಬಿಸಿತ್ತು.
SCROLL FOR NEXT