ನವದೆಹಲಿ: ದೇಶ ಮುನ್ನಡೆಯಲು ಅಡ್ಡಿಯಾಗಿರುವ ಶಕ್ತಿಗಳ ವಿರುದ್ಧ ಹೋರಾಟ ಮಾಡುವುದು ಎಲ್ಲಾ ಭಾರತೀಯರ ಕರ್ತವ್ಯ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಜಗಜೀವನ್ ರಾಮ್ ಅವರ 111 ನೇ ಜನ್ಮದಿನಾಚರಣೆ ಅಂಗವಾಗಿ ಮಾತನಾಡಿರುವ ಮನಮೋಹನ್ ಸಿಂಗ್, ಸಮಾನತೆಗಾಗಿ ಶ್ರಮಿಸುವುದೇ ಜಗಜೀವನ್ ರಾಮ್ ಅವರಿಗೆ ನಾವು ನೀಡಬಹುದಾದ ಗೌರವ ಎಂದು ಹೇಳಿದ್ದಾರೆ. ದೇಶದ ಅಭಿವೃದ್ಧಿ, ಮುನ್ನಡೆಯನ್ನು ತಡೆಯುವಂತಹ ಅನೇಕ ಶಕ್ತಿಗಳಿವೆ, ಇಂತಹ ಶಕ್ತಿಗಳ ವಿರುದ್ಧ ಹೋರಾಡುವುದು ನಮ್ಮ ಕರ್ತವ್ಯ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.