ವಾಷಿಂಗ್ ಟನ್: ಫೈಟರ್ ಜೆಟ್ ವಿಭಾಗದಲ್ಲಿ ಭಾರತ-ಅಮೆರಿಕದ ದ್ವಿಪಕ್ಷೀಯ ಸಂಬಂಧ ಎಫ್-16, ಎಫ್-18 ಬಗ್ಗೆ ಭಾರತ ಕೈಗೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾರತ ಅಮೆರಿಕ ಪೂರೈಕೆ ಮಾಡಲು ಉತ್ಸುಕವಾಗಿರುವ ಎಫ್-16, ಎಫ್-18 ಫೈಟರ್ ಜೆಟ್ ಗಳ ಬಗ್ಗೆ ಸಕಾರಾತ್ಮಕ ನಿಲುವು ತೆಗೆದುಕೊಂಡರೆ ಅದು ಅತ್ಯಾಧುನಿಕ 5 ನೇ ತಲೆಮಾರಿನ ಫೈಟರ್ ಜೆಟ್ ಗಳನ್ನು ಹೊಂದಿರುವ ಅಗ್ರಗಣ್ಯ ರಾಷ್ಟ್ರಗಳ ಪೈಕಿ ಇರಲಿದ್ದು ಟ್ರಂಪ್ ಆಡಳಿತ ಫೈಟರ್ ಜೆಟ್ ಗಳಿಗೆ ಸಂಬಂಧಿಸಿದಂತೆ ಭಾರತದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲು ಬಯಸುತ್ತಿದೆ ಎಂದು ದಕ್ಷಿಣ ಹಾಗೂ ಆಗ್ನೇಯ ಏಷ್ಯಾದ ರಕ್ಷಣಾ ವಿಭಾಗದ ಉಪ ಸಹಾಯಕ ಕಾರ್ಯದರ್ಶಿ ಜೋ ಫೆಲ್ಟರ್ ಹೇಳಿದ್ದಾರೆ.