ನವದೆಹಲಿ : ಕೇಂದ್ರಸರ್ಕಾರ ದೇಶದಲ್ಲಿನ ದಲಿತರನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿ ಉತ್ತರ ಪ್ರದೇಶದ ಬಿಜೆಪಿ ಸಂಸದ ನಾಗಿನಾ ಯಶವಂತ್ ಸಿನ್ಹಾ ಪ್ರಧಾನಮಂತ್ರಿ ನರೇಂದ್ರಮೋದಿಗೆ ಪತ್ರ ಬರೆದಿದ್ದಾರೆ.ಮೀಸಲಾತಿಯಿಂದಾಗಿ ತಾವೂ ಸಂಸದನಾಗಿರುವುದಾಗಿ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.
ಮೀಸಲಾತಿಯಿಂದಾಗಿ ಸಂಸದನಾಗಿದ್ದೇನೆ ಒಂದು ವೇಳೆ ದಲಿತನಾಗದಿದ್ದರೆ ಈ ಅವಕಾಶವನ್ನು ಉಪಯೋಗಿಸಿಕೊಳ್ಳಲು ಸಾಧ್ಯವಿರಲಿಲ್ಲ. ಬಿಜೆಪಿ ಸರ್ಕಾರದ ನಾಲ್ಕುವರ್ಷದ ಆಡಳಿತಾವಧಿಯಲ್ಲಿ ಕೇಂದ್ರಸರ್ಕಾರ ದೇಶದಲ್ಲಿನ 30 ಕೋಟಿ ದಲಿತರಿಗೆ ಏನೂ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಪರಿಶಿಷ್ಟ ಜಾತಿ, ಪಂಗಡದದ ಮೇಲಿನ ದೌರ್ಜನ್ಯ ವಿರುದ್ಧ ತಡೆ ಕಾಯ್ದೆ ಕುರಿತು ಸುಪ್ರೀಂಕೋರ್ಟ್ ಮರುಶೀಲಿಸುವಂತೆ ಒತ್ತಡ ಹೇರುವಂತೆಯೂ ಅವರು ಮನವಿ ಮಾಡಿಕೊಂಡಿದ್ದಾರೆ.
ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ರಾಬರ್ಟ್ಸ್ ಗಂಜ್ ನ ಸಂಸದೆ ಚೊಟೆ ಲಾಲ್ ಖಾರವಾರ್ ಪ್ರಧಾನಿ ನರೇಂದ್ರಮೋದಿಗೆ ಪತ್ರ ಬರೆದಿದ್ದರು.
ಚಾಂದೌಲಿಯಲ್ಲಿನ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಭ್ರಷ್ಟಾಚಾರ ಸಂಬಂಧ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾಗ ಅವರು ತಮ್ಮನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಹೊರ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಚೊಟೆ ಲಾಲ್ ಖಾರವಾರ್, ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗಕ್ಕೂ ದೂರು ಸಲ್ಲಿಸಿದ್ದರು.