ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮತ್ತು ಭಾರತ ಪ್ರಧಾನಿ ನರೇಂದ್ರಮೋದಿ 
ದೇಶ

ಕ್ಷಿಪ್ರಗತಿಯ ಸಂಪರ್ಕ ಯೋಜನೆಗೆ ಭಾರತ ನೇಪಾಳ ಪರಸ್ಪರ ಸಹಕಾರ ಒಪ್ಪಂದ

ರಕ್ಷಣೆ ಮತ್ತು ಭದ್ರತೆ, ಸಂಪರ್ಕ, ವ್ಯಾಪಾರ, ಕೃಷಿ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕೆ ಭಾರತ ಹಾಗೂ ನೇಪಾಳ ಒಪ್ಪಂದ ಮಾಡಿಕೊಂಡಿವೆ.

ನವದೆಹಲಿ: ರಕ್ಷಣೆ ಮತ್ತು ಭದ್ರತೆ, ಸಂಪರ್ಕ, ವ್ಯಾಪಾರ, ಕೃಷಿ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕೆ ಭಾರತ  ಹಾಗೂ ನೇಪಾಳ ಒಪ್ಪಂದ ಮಾಡಿಕೊಂಡಿವೆ.

ಉಭಯ ದೇಶಗಳ ನಡುವಿನ  ದ್ವಿಪಕ್ಷೀಯ ಬಾಂಧವ್ಯ ವೃದ್ಧಿ  ಸಂಬಂಧ   ಮಾತುಕತೆ ನಡೆಸಿದ ಬಳಿಕ  ಪ್ರಧಾನಿ ನರೇಂದ್ರಮೋದಿ ಹಾಗೂ ನೇಪಾಳ ಪ್ರಧಾನಮಂತ್ರಿ ಕೆ ಪಿ ಶರ್ಮಾ ಒಲಿ ಒಪ್ಪಂದಕ್ಕೆ  ಅಂಕಿತ ಹಾಕಿದ್ದಾರೆ.

ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನರೇಂದ್ರಮೋದಿ, ನೇಪಾಳದಲ್ಲಿ ಪ್ರಜಾಪ್ರಭುತ್ವವನ್ನು ಬಲಗೊಳಿಸಲು ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.

ನೇಪಾಳ ಪ್ರದಾನಿ ಕೆ. ಪಿ. ಶರ್ಮ ಮಾತನಾಡಿ, ಉಭಯ ದೇಶಗಳ ನಡುವೆ ವಿಶ್ವಾಸರ್ಹ ಸಂಬಂಧ ಬೆಳೆಸಲು ನೇಪಾಳ ಸರ್ಕಾರ ಬಯಸುತ್ತದೆ . 21 ನೇ ಶತಮಾನದಲ್ಲಿ ಸಂಬಂಧವನ್ನು ಮತ್ತಷ್ಟು ವೃದ್ದಿಯ ಗುರಿಯೊಂದಿಗೆ ಭಾರತಕ್ಕೆ ಆಗಮಿಸಿರುವುದಾಗಿ ಅವರು ತಿಳಿಸಿದರು.

ಕಠ್ಮಂಡು ಮತ್ತು  ಭಾರತ ನಡುವೆ ನೂತನ ರೈಲು ಮಾರ್ಗ ಅನುಷ್ಠಾನಕ್ಕೆ ಉಭಯ ರಾಷ್ಟ್ರಗಳು ಸಮ್ಮತಿಸಿದ್ದು, ರಕ್ಷಣಾ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಒಪ್ಪಂದವೇರ್ಪಟ್ಟಿದೆ . ಗಡಿಭಾಗ ದುರುಪಯೋಗವಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪರಸ್ಪರ ಕಾರ್ಯ ನಿರ್ವಹಿಸಲಾಗುವುದುಎಂದು ಮೋದಿ ತಿಳಿಸಿದರು.

ಇತರ ರಾಷ್ಟ್ರಗಳಿಗಿಂತ ಭಾರತದೊಂದಿಗಿನ ಸಂಬಂಧ ವೃದ್ದಿ ಕಡೆಗೆ ತಮ್ಮ ಆದ್ಯತೆ  ಹೆಚ್ಚಿದ್ದು,
ನೇಪಾಳಕ್ಕೆ ಬರುವಂತೆ ಮೋದಿಗೆ ಆಹ್ವಾನ ನೀಡಲಾಗಿದೆ ಎಂದು ಕೆ. ಪಿ. ಶರ್ಮಾ  ಒಲಿ ಹೇಳಿದರು.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!

ಬರದಿಂದ ರೈತರು ಕಂಗಾಲಾಗಿದ್ದರೂ ಸಿಎಂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್'ನದ್ದೇ ಚಿಂತೆ: HDK ವ್ಯಂಗ್ಯ