ಅಲ್ವಾರ್: ಹಿಂದೂಗಳೆ ಮುಸ್ಲಿಂರನ್ನು ನಿಮ್ಮ ಮನೆಯೊಳಗೆ ಬಿಟ್ಟುಕೊಳ್ಳಬೇಡಿ ಎಂದು ರಾಜಸ್ತಾನದ ಬಿಜೆಪಿ ಶಾಸಕ ಬನ್ವಾರಿ ಲಾಲ್ ಸಿಂಘಾಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮುಸ್ಲಿಂರು ಎಲ್ಲಾ ವಿಧದ ಅಪರಾಧಗಳಲ್ಲಿಯೂ ತೊಡಗಿಕೊಂಡಿದ್ದಾರೆ. ನಾನು ನನ್ನ ನಿವಾಸ ಅಥವಾ ಕಚೇರಿ ಪ್ರವೇಶಿಸಲು ಮತ್ತು ಅವರ ಮತಗಳನ್ನು ಪಡೆಯಲು ಅನುಮತಿಸಲ್ಲ ಎಂದು ಹೇಳಿಕೊಂಡಿದ್ದಾರೆ.
ಮುಸ್ಲಿಂರು ಬಿಜೆಪಿ ಮತ ಹಾಕುವುದಿಲ್ಲ. ನಾನು ಅವರ ಮತಗಳಿಗಾಗಿ ಹೋಗುವುದಿಲ್ಲ. ಅವರ ನನಗೆ ಮತಗಳನ್ನು ಹಾಕಿದರೆ ಅವರಿಗೆ ನಾನು ಸಹಾಯ ಮಾಡುವ ಮೂಲಕ ಅವರ ಅಪರಾಧಗಳಿಗೆ ನಾನು ಕುಮ್ಮಕ್ಕು ಕೊಟ್ಟಂತಾಗುತ್ತದೆ. ಹೀಗಾಗಿ ನಾನು ಅವರಿಂದ ಅಂತರ ಕಾಯ್ದುಕೊಂಡಿದ್ದೇನೆ ಎಂದು ಬನ್ವಾರಿ ಲಾಲ್ ಸಿಂಘಾಲ್ ಹೇಳಿದ್ದಾರೆ.
ಈ ಹಿಂದೆ ಆರ್ಎಸ್ಎಸ್ ಮತ್ತು ವಿಹೆಚ್ಪಿ ಜತೆ ಗುರುತಿಸಿಕೊಂಡಿದ್ದ ಬನ್ವಾರಿ ಹಲವು ಸಹ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಮುಸ್ಲಿಂರು ಗೋಹತ್ಯೆ, ಲವ್ ಜಿಹಾದ್, ವಂಚನೆಗಾಗಿ ನಕಲಿ ಗುರುತುಗಳನ್ನು ಸೃಷ್ಟಿಸುವುದು ಅವರ ಕಾಯಕವಾಗಿದೆ ಎಂದು ಆರೋಪಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics