ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್
ಲಕ್ನೋ: ಅತ್ಯಾಚಾರ ಆರೋಪ ಸಂಬಂಧ ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ಸಹೋದರ ಅತುಲ್ ಸೆಂಗರ್ ಅವರನ್ನು ಉನ್ನೋದಲ್ಲಿ ಪೊಲೀಸರು ಬಂಧಿಸಿದ್ದಾರೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಆದೇಶದ ಮೇರೆಗೆ ಅತುಲ್ ಸಿಂಗ್ ಸೆಹರ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ,
18 ವರ್ಷದ ಯುವತಿ ಮೇಲೆ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಮತ್ತು ಆತನ ಸಹೋದರರು ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ, ಜಿಲ್ಲಾ ಕಾರಾಗೃಹದಲ್ಲಿದ್ದ ಸಂತ್ರಸ್ಥೆಯ ತಂದೆ ಪಪ್ಪು ಸಿಂಗ್ ಅವರನ್ನು ಭಾನುವಾರ ರಾತ್ರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸೋಮವಾರ ಅವರು ಸಾವನ್ನಪ್ಪಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಂತ್ರಸ್ಥೆ, ಕುಲದೀಪ್ ಸೆಂಗರ್ ಅವರನ್ನು ಬಂಧನಕ್ಕೊಳಪಡಿಸಿಲ್ಲ. ಇನ್ನೂ ಸಹೋದರನನ್ನು ಬಂಧಿಸಿರುವುದರ ಬಗ್ಗೆ ತಿಳಿದಿಲ್ಲ. ಇವರನ್ನು ಮರಣದಂಡನೆಗೆ ಒಳಪಡಿಸಬೇಕೆಂಬುದು ನನ್ನ ಬೇಡಿಕೆ. ಇವರಿಂದ ನನ್ನ ಬದುಕು ಶೋಚನೀಯವಾಗಿದೆ. ನನಗೆ ನ್ಯಾಯ ಬೇಕು. ನನ್ನ ತಂದೆಯನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಶಾಸಕನ ಸಹೋದರ ಅತುಲ್ ಸಿಂಗ್ ನನ್ನು ಥಳಿಸಿದ್ದ ಆರೋಪದ ಮೇಲೆ ಸಂತ್ರಸ್ತೆ ತಂದೆ ಪಪ್ಪು ಸಿಂಗ್ ಅವರನ್ನು ಏಪ್ರಿಲ್ 5 ರಂದು ಬಂಧಿಸಲಾಗಿತ್ತು.