ದೇಶ

ನನ್ನ ಸಾವಿಗೆ ಪ್ರಧಾನಿ ಮೋದಿ ಕಾರಣ: ಬೆಳೆನಷ್ಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ರ

Srinivasamurthy VN
ಮುಂಬೈ: ಬೆಳೆ ನಷ್ಟದಿಂದ ಕಂಗಾಲಾಗಿದ್ದ ರೈತನೋರ್ವ ಬೆಳೆ ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದು, ತನ್ನ ಡೆತ್ ನೋಟ್ ನಲ್ಲಿ ತನ್ನ ಆತ್ಮಹತ್ಯೆಗೆ ಪ್ರಧಾನಿ ಮೋದಿ ಕಾರಣ ಎಂದು ಬರೆದಿದ್ದಾನೆ.
ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ಯವತ್ ಮಾಲಾ ಜಿಲ್ಲೆಯ ರೈತ ಶಂಕರ್ ಛಯರೆ ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳೆಗಳಿಗೆ ಸಿಂಪಡಿಸುವ ವಿಷಕಾರಿ ರಾಸಾಯನಿಕವನ್ನುಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಸಾಯನಿತ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದ ಶಂಕರ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆ ಅವರು ಸಾವನ್ನಪ್ಪಿದ್ದರು. ಆತ್ಮಹತ್ಯೆಗೂ ಮುನ್ನ ರೈತ ಶಂಕರ್ ಡೆತ್ ನೋಟ್ ಬರೆದಿದ್ದು, ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ಪ್ರಧಾನಿ ಮೋದಿ ಅವರ ಕಾರಣ ಎಂದು ಬರೆದಿದ್ದಾರೆ. 
ರೈತ ಶಂಕರ್ ತಮ್ಮ ಕೃಷಿ ಭೂಮಿಯಲ್ಲಿ ಸಾಲ ಮಾಡಿ ಹತ್ತಿ ಬೆಳೆ ಹಾಕಿದ್ದರಂತೆ. ಸ್ಥಳೀಯ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನಿಂದ ಶಂಕರ್ 90 ಸಾವಿರ ಸಾಲ ಪಡೆದಿದ್ದರಂತೆ. ಅಂತೆಯೇ ಇತರೆ ಖಾಸಗಿ ವ್ಯಕ್ತಿಗಳಿಂದ 3 ಲಕ್ಷ ರೂ ಸಾಲ ಪಡೆದಿದ್ದರಂತೆ. ಆದರೆ ಬೆಳೆಗೆ ಕ್ರಿಮಿಗಳು ದಾಳಿ ಮಾಡಿದ್ದು, ಈ ವೇಳೆ ಬೆಳೆ ಸಂಪೂರ್ಣ ಹಾಳಾಗಿದೆ. ಇದರಿಂದಾಗಿ ಸಾಲತೀರಿಸಲಾಗದೇ ಬೇಸತ್ತಿದ್ದ ರೈತ ಶಂಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟಂಜಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಡೆತ್ ನೋಟ್ ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
SCROLL FOR NEXT