'ಕಾವೇರಿ'ಗಾಗಿ ಬೆಂಕಿ ಹಚ್ಚಿಕೊಂಡಿದ್ದ ವೈಕೋ ಸಂಬಂಧಿ ಸಾವು
ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ಶುಕ್ರವಾರ ಬೆಂಕಿ ಹಚ್ಚಿಕೊಂಡಿದ್ದ ಎಂಡಿಎಂಕೆ ನಾಯಕ ವೈಕೋ ಅವರ...
ಮದುರೈ: ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ಶುಕ್ರವಾರ ಬೆಂಕಿ ಹಚ್ಚಿಕೊಂಡಿದ್ದ ಎಂಡಿಎಂಕೆ ನಾಯಕ ವೈಕೋ ಅವರ ಸೋದರಳಿಯ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿದ್ದಾರೆ.
ಸ್ಥಳೀಯ ಆಸ್ಪತ್ರೆಯಲ್ಲಿ ಅಳಿಯ ಸುವರ್ಣ ಸುರೇಶ್ ಅವರ ಸಾವಿನ ಸುದ್ಧಿ ತಿಳಿಸಿದ ವೈಕೋ ಅವರು, ಕಾವೇರಿ ವಿಚಾರವಾಗಿ ಯಾರೂ ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈಹಾಕಬಾರದು ಎಂದು ಯುವಕರಿಗೆ ಕರೆ ನೀಡಿದ್ದಾರೆ.
ಸುರೇಶ್ ಅವರ ಸಾವಿನಿಂದಾಗಿ ಈಗ ಅವರ ಈಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಕಾವೇರಿ ವಿಚಾರವಾಗಿ ನಾನು ಮಾಡಿದ ಭಾಷಣವನ್ನು ಟಿವಿಯಲ್ಲಿ ನೋಡಿದ ಸುರೇಶ್ ತೀವ್ರವಾಗಿ ನೊಂದಿದ್ದರಂತೆ. ಕಾವೇರಿಗಾಗಿ ಬೆಂಕಿ ಹಚ್ಚಿಕೊಂಡು ಪ್ರತಿಭಟನೆ ನಡೆಸುವುದಾಗಿ ಕುಟುಂಬಸ್ಥರಿಗೆ ಹೇಳಿದ್ದನಂತೆ. ಈಗ ಆತ ಸಾವನ್ನಪ್ಪಿದ್ದಾನೆ. ನಾನು ನನ್ನ ಪತ್ನಿ, ಅವರ ತಂದೆ, ಇಡೀ ಕುಟುಂಬಕ್ಕೆ ಏನೆಂದು ಸಾಂತ್ವನ ಹೇಳಲಿ ಎಂದು ತಿಳಿಯುತ್ತಿಲ್ಲ ಎಂದು ವೈಕೋ ಕಣ್ಣೀರಿಟ್ಟರು.
ನಿನ್ನೆ ಸೋಲಕರೈನಲ್ಲಿ ಕಾವೇರಿಗಾಗಿ ಸುವರ್ಣ ಸುರೇಶ್ ಬೆಂಕಿ ಹಚ್ಚಿಕೊಂಡಿದ್ದರು. ಇಂದು ಚಿಕಿತ್ಸೆ ಫಲಕಾರಿಯಾದ ಮಧುರೈನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ವೈಕೋ ಅವರ ಪತ್ನಿಯ ಅಣ್ಣನ ಮಗನಾಗಿದ್ದ ಸುವರ್ಣ ಸುರೇಶ್ ದೇಹ ಶೇ. 80ರಷ್ಟು ಭಾಗ ಸುಟ್ಟು ಹೋಗಿತ್ತು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.