ದೇಶ

ನಮ್ಮ ಮಗಳು ವೈದ್ಯೆಯಾಗಬೇಕೆಂದು ಬಯಸಿದ್ದೆವು: ಅತ್ಯಾಚಾರ ಸಂತ್ರಸ್ತ ಬಾಲಕಿ ಕುಟುಂಬ

Manjula VN
ಉಧಂಪುರ; ಸುಂದರವಾದ ಹಾಗೂ ಬುದ್ಧಿವಂತಳಾಗಿದ್ದ ನಮ್ಮ ಮಗಳನ್ನು ಭವಿಷ್ಯದಲ್ಲಿ ವೈದ್ಯೆ ಮಾಡಬೇಕೆಂದು ಬಯಸಿದ್ದೆವು ಎಂದು ಕತುವಾ ಅತ್ಯಾಚಾರ ಸಂತ್ರಸ್ತ ಬಾಲಕಿಯ ಕುಟುಂಬಸ್ಥರು ಹೇಳಿದ್ದಾರೆ. 
ಕಾಮುಕರ ಅಟ್ಟಹಾಸಕ್ಕೆ ಬಲಿಯಾದ 8 ವರ್ಷದ ಬಾಲಕಿ ಕುರಿತು ತಾಯಿ ಕಣ್ಣೀರಿಡುತ್ತಾ ಮಗಳ ಕುರಿತು ತಾವು ಕಂಡಿದ್ದ ಕನಸುಗಳನ್ನು ವಿವರಿಸಿದ್ದಾರೆ. 
ನನ್ನ ಮಗಳು ಅತ್ಯಂತ ಸುಂದರ ಹಾಗೂ ಬುದ್ಧಿವಂತೆಯಾಗಿದ್ದಳು. ಆಕೆ ದೊಡ್ಡವಳಾದಾಗ ವೈದ್ಯೆಮಾಡಬೇಕೆಂದು ಬಯಸಿದ್ದೆವು. ಆಕೆಯನ್ನು ಚಿತ್ರಹಿಂಸೆಕೊಟ್ಟು ಹತ್ಯೆ ಮಾಡಲಾಗಿದೆ. ತಪ್ಪಿತಸ್ಥರಿಗೆ ಸರ್ಕಾರ ಕಠಿಣ ಶಿಕ್ಷೆ ನೀಡಬೇಕು. ಮರಣ ದಂಡನೆ ನೀಡಬೇಕು. ಈ ರೀತಿಯ ಮತ್ತೆ ಯಾವುದೇ ಘಟನೆಗಳು ಸಂಭವಿಸಬಾರದು ಎಂದು ಹೇಳಿದ್ದಾರೆ. 
ಆಕೆ 1 ವರ್ಷದ ಮಗುವಾಗಿದ್ದಾಗ ಒತ್ತಾಯ ಮಾಡಿದ್ದರಿಂದಾಗಿ ಮಹಿಳೆ ತನ್ನ ಸಹೋದರನಿಗೆ ದತ್ತು ನೀಡಿದ್ದಳು.  
ಇದೀಗ ಘಟನೆಗೆ ತಾಯಿ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಸಹೋದರನ ಮನೆಯಲ್ಲಿ ಬಿಟ್ಟಿದ್ದು ನನ್ನದೇ ತಪ್ಪು ಎಂದು ಇದೀಗ ರೋಧಿಸುತ್ತಿದ್ದಾರೆ. 
ಆಕೆಯನ್ನು ಯಾವ ಕಾರಣಕ್ಕೆ ಹತ್ಯೆ ಮಾಡಲಾಯಿತು? ಆಕೆ ದನ-ಕರುಗಳಿಗೆ ಮೇವುಗಳನ್ನು ನೀಡಿ, ಕುದುರೆಗಳನ್ನು ನೋಡಿಕೊಳ್ಳುತ್ತಿದ್ದಳು. ಅಕೆಗಿನ್ನೂ 8 ವರ್ಷವಷ್ಟೇ ಆಗಿತ್ತು. ಆಕೆಯನ್ನು ಅಷ್ಟು ಕ್ರೂರವಾಗಿ ಏಕೆ ಹತ್ಯೆ ಮಾಡಿದರು? ಹಂತಕರಿಗೆ ಮರಣ ದಂಡನೆ ನೀಡಬೇಕು ಎಂದಿದ್ದಾರೆ. 
ಹಿಂದೂಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೆವು. ಸಾಮರಸ್ಯದಿಂದ ಜೀವನ ನಡೆಸುತ್ತಿದ್ದೆವು. ಆದರೆ, ಘಟನೆ ಬಳಿಕ ನಮಗೆ ಭಯವಾಗುತ್ತಿದೆ. ನಮಗೆ ನಮ್ಮ ಮಗಳ ಸಾವಿಗೆ ನ್ಯಾಯ ಬೇಕು. ಅವಳು ನಮ್ಮ ಪ್ರೀತಿಯ ಮಗಳಾಗಿದ್ದಳು. ಆಕೆ ಅತ್ಯಂತ ಸುಂದರವಾಗಿದ್ದಳು, ಪ್ರೀತಿಯ ಮಗಳಾಗಿದ್ದಳು. ಮಗಳನ್ನು ಹಿಂದಕ್ಕೆ ಕರೆಸಿಕೊಂಡು ಆಕೆಗೆ ವಿದ್ಯಾಭ್ಯಾಸ ನೀಡಿ, ವೈದ್ಯೆ ಮಾಡಬೇಕೆಂದು ಬಯಸಿದ್ದೆವು ಎಂದು ಹೇಳಿದ್ದಾರೆ. 
ಬಾಲಕಿಯ ತಂದೆ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೇಟಿ ಪಡಾವೋ ಬೇಟಿ ಬಚಾವೋ ಎಂದು ಘೋಷಣಾ ವಾಕ್ಯಗಳನ್ನು ಹೇಳುತ್ತಾರೆ. ಆದರೆ, ಈ ರೀತಿ ಹೆಣ್ಣುಮಕ್ಕಳನ್ನು ರಕ್ಷಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ? 
ಹಂತಕರಿಗೆ ಮರಣ ದಂಡನೆ ನೀಡಬೇಕು. ನಮಗೆ ಸಿಬಿಐ ತನಿಖೆ ಬೇಕಿಲ್ಲ. ಅಪರಾಧ ವಿಭಾಗದ ಮೇಲೆ ನಮಗೆ ನಂಬಿಕೆಯಿದೆ. ಸಚಿವಗಳು ಅತ್ಯಾಚಾರ ಮಾಡಿದ್ದ ಆರೋಪಿಗಳಿಗೇ ಬೆಂಬಲ ನೀಡುತ್ತಿದ್ದಾರೆ. ಅತ್ಯಾಚಾರಿಗಳು ಮುಗ್ಧರು ಎಂದು ಹೇಳುತ್ತಿದ್ದಾರೆ. ಇದು ಸರಿಯಲ್ಲ ಎಂದಿ ಹೇಳಿದ್ದಾರೆ. 
ಹಿಂದೂ ಮತ್ತು ಮುಸ್ಲಿಮರ ನಡುವಿ ವ್ಯತ್ಯಾಸ ಕುರಿತು ಬಾಲಕಿಗೆ ತಿಳುವಳಿಕೆಯಿಲ್ಲ ಎಂಬುದು ಇಡೀ ವಿಶ್ವಕ್ಕೆ ಗೊತ್ತಿರುತ್ತದೆ. ನಮ್ಮ ಮಗಳನ್ನು ಅತ್ಯಂತ ಕ್ರೂರ ಹಾಗೂ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅವಳು ನಮ್ಮ ಮಗಳೆಂದು ನಾನು ಹೇಳುತ್ತಿಲ್ಲ. ಆಕೆ ಎಲ್ಲರ ಮಗಳು ಧಾರ್ಮಿಕ ಕಣ್ಣಿನಿಂದ ಪ್ರಕರಣವನ್ನು ನೋಡಬಾರದು ಎಂದು ಹೇಳಿದ್ದಾರೆ. 
SCROLL FOR NEXT