ಸಾಂದರ್ಭಿಕ ಚಿತ್ರ 
ದೇಶ

2 ದಿನದ ಹಸುಳೆ ಶವ ಆಸ್ಪತ್ರೆ ಟಾಯ್ಲೆಟ್ ಕಮೋಡ್'ನಲ್ಲಿ ಪತ್ತೆ!

2 ದಿನದ ಹಸುಳೆಯೊಂದನ್ನು ಟಾಯ್ಲೆಟ್'ನಲ್ಲಿ ಫ್ಲಶ್ ಮಾಡಿರುವ ಆಘಾತಕಾರಿ ಹಾಗೂ ಹೇಯ ಘಟನೆ ಕೇರಳ ರಾಜ್ಯದಲ್ಲಿ ನಡೆದಿದೆ...

ತಿರುವನಂತಪುರ: 2 ದಿನದ ಹಸುಳೆಯೊಂದನ್ನು ಟಾಯ್ಲೆಟ್'ನಲ್ಲಿ ಫ್ಲಶ್ ಮಾಡಿರುವ ಆಘಾತಕಾರಿ ಹಾಗೂ ಹೇಯ ಘಟನೆ ಕೇರಳ ರಾಜ್ಯದಲ್ಲಿ ನಡೆದಿದೆ. 
ನೀರು ಹೋಗದೇ ಬ್ಲಾಕ್ ಆಗಿದ್ದ ಕಮೋಡನ್ನು ಪ್ಲಂಬರ್ ಗಳು ಸ್ವಚ್ಛಗೊಳಿಸಲು ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ. 
ಕೇರಳ ರಾಜ್ಯದ ಪೆರಿತಳ್ಮಣ್ಣ ಕಳೆದ ಶುಕ್ರವಾರ ಡಾ.ಅಬ್ದುಲ್ ರೆಹಮಾನ್ ಎಂಬುವವರ ಕ್ಲಿನಿಕ್ ನಲ್ಲಿ ಘಟನೆ ನಡೆದಿದೆ. 
ರೆಹಮಾನ್ ಅವತು ತಮ್ಮ ವೈದ್ಯ ಪತ್ನಿಯ ಸಂಗಡ ಇಲ್ಲಿ ಕ್ಲಿನಿಕ್ ನಡೆಸುತ್ತಿದ್ದಾರೆ. ಕ್ಲಿನಿಕ್ ನಲ್ಲಿ ಶೌಚಾಲಯವಿದ್ದು, ಅದನ್ನು ಸ್ವಚ್ಛಗೊಳಿಸಲು ಕೆಲಸದವಳು ಬಂದಿದ್ಳು. ಆಗ ಕಮೋಡ್ ನಲ್ಲಿ ನೀರು ಹೋಗದ್ದನ್ನು ನೋಡಿ ಆಕೆ ವೈದ್ಯರಿಗೆ ಮಾಹಿತಿ ತಿಳಿಸಿದ್ದಳು. 
ಈ ವೇಳೆ ಡಾ.ಅಬ್ದುಲ್ ಅವರು ಪ್ಲಂಬರ್ ಗಳನ್ನು ಕರೆಸಿದ್ದರು. ಪ್ಲಂಬರ್ ಗಳು ಕಮೋಡ್ ನ ಪೈಪ್'ನ್ನು ಶೋಧಿಸಿದಾಗ ಅದರಲ್ಲಿ 2 ದಿನದ ಹಸುಳೆ ಪತ್ತೆಯಾಗಿದೆ. ಇದರಿಂದ ಆಘಾತಗೊಂಡ ವೈದ್ಯ ಅಬ್ಲುಲ್ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ಲೆಕ್ಕಾಚಾರವೇ ತಲೆಕೆಳಗೆ: Iran ನಿಂದ ವೇಗವಾಗಿ ಶಸ್ತ್ರಾಸ್ತ್ರ ನೆಲೆಗಳ ಪುನರ್‌ನಿರ್ಮಾಣ, ಈಗಾಗಲೇ ಡ್ರೋನ್ ಉತ್ಪಾದನೆ ಆರಂಭ: ವರದಿ

No police, No court: ಅಕ್ರಮ ಬಾಂಗ್ಲಾ ವಲಸಿಗರು ಇನ್ನು ಮುಂದೆ ನೇರ BSF ವಶಕ್ಕೆ: CM ಸುವೇಂದು ಅಧಿಕಾರಿ ಸೂಚನೆ

'ಗೃಹಲಕ್ಷ್ಮಿ ಹಣ ಕೊಡಿಸಿ'; ಹೈಕೋರ್ಟ್ ಮೆಟ್ಟಿಲೇರಿದ ಮಹಿಳೆಯರು, ಸರ್ಕಾರಕ್ಕೆ ನೋಟಿಸ್ ಜಾರಿ

IPL 2026: 'ಹಾರ್ದಿಕ್ ಪಾಂಡ್ಯ ತಂಡದ ವಾತಾವರಣ ಹಾಳು ಮಾಡಿದರು, ರೋಹಿತ್ ಶರ್ಮಾರ ಗೌರವ ಮರಳಿಸಿ': ಮುಂಬೈ ಇಂಡಿಯನ್ಸ್ ಗೆ ಸಲಹೆ

IPL 2026: ಕೊನೆಗೂ 13 ವರ್ಷಗಳ ಹಳೆಯ Chris Gayle ದಾಖಲೆ ಮುರಿದ Sai Sudharsan

SCROLL FOR NEXT