ದೇಶ

ಡ್ಯಾನಿಶ್ ಮಹಿಳೆ ಅತ್ಯಾಚಾರ ಪ್ರಕರಣ: ಕಾಮುಕರಿಗೆ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್

Lingaraj Badiger
ನವದೆಹಲಿ: 2014ರಲ್ಲಿ ಡ್ಯಾನಿಶ್ ಮಹಿಳೆಯೊಬ್ಬರನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಐವರು ಕಾಮುಕರಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಸೋಮವಾರ ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ.
ನ್ಯಾಯಮೂರ್ತಿ ಎಸ್ ಮುರಳಿಧರ್ ಮತ್ತು ನ್ಯಾಯಮೂರ್ತಿ ಐಎಸ್ ಮಹೇಂದರ್ ಅವರನ್ನೊಳಗೊಂಡ ಪೀಠ, ಸೆಷನ್ಸ್ ಕೋರ್ಟ್ ತೀರ್ಪು ಪ್ರಶ್ನಿಸಿ ಅಪರಾಧಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಇಂದು ವಜಾಗೊಳಿಸಿದೆ.
ಡ್ಯಾನಿಶ್ ಮಹಿಳೆಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ದರೋಡೆ ಮಾಡಿದ್ದ ರಾಜು ಹಾಗೂ ರಾಜು ಚಕ್ಕಗೆ ಜೀವಾವಧಿ ಶಿಕ್ಷೆ ಜೊತೆ 83 ಸಾವಿರ ದಂಡ, ಮಹೇಂದ್ರ ಮತ್ತು ಮೊಹದ್ ರಾಜಾಗೆ ಜೈಲು ಶಿಕ್ಷೆ ಜೊತೆ 93 ಸಾವಿರ ದಂಡ, ಅರ್ಜುನ್ ಗೆ 1 ಲಕ್ಷ ರುಪಾಯಿ ದಂಡ ವಿಧಿಸಿ ಸೆಷೆನ್ಸ್  ಕೋರ್ಟ್ ನ್ಯಾಯಮೂರ್ತಿ ರಮೇಶ್ ಕುಮಾರ್ ತೀರ್ಪು ನೀಡಿದ್ದರು. 
2014ರ ಜನೆವರಿ14ರಂದು ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ಡ್ಯಾನಿಶ್ ಮಹಿಳೆ ಮೇಲೆ 9 ಜನ ಅತ್ಯಾಚಾರ ಎಸಗಿದ್ದರು. ಈ ಪೈಕಿ ಸದ್ಯ ಐವರಿಗೆ ಶಿಕ್ಷೆಯಾಗಿದ್ದು, 6 ನೇ ಅಪರಾಧಿ ಸಾವನ್ನಪ್ಪಿದ್ದಾನೆ. ಉಳಿದ ಮೂವರು ಬಾಲಾಪರಾಧಿಗಳಾಗಿದ್ದು, ಬಾಲ ನ್ಯಾಯ ಮಂಡಳಿಯಲ್ಲಿ ವಿಚಾರಣೆ ಕೈಗೊಳ್ಳಲಾಗುತ್ತಿದೆ.
SCROLL FOR NEXT