ದೇಶ

ಅಮರಾನಾಥ ಗುಹೆ ದೇವಾಲಯದಲ್ಲಿ ಯಾತ್ರಾರ್ಥಿಗಳನ್ನು ನಿರ್ಬಂಧಿಸುವ ಎನ್ ಜಿಟಿ ಆದೇಶ ಸುಪ್ರೀಂಕೋರ್ಟ್ ನಿಂದ ವಜಾ

Nagaraja AB

ನವದೆಹಲಿ: ಪ್ರಸಿದ್ಧ ಪುಣ್ಯಕ್ಷೇತ್ರ  ದಕ್ಷಿಣ ಕಾಶ್ಮೀರದಲ್ಲಿನ ಅಮರಾನಾಥ ಗುಹೆ ದೇವಾಲಯದಲ್ಲಿ  ನೈಸರ್ಗಿಕವಾಗಿ ರೂಪುಗೊಂಡಿರುವ   ಪವಿತ್ರ ಮಹಾ ಶಿವಲಿಂಗ ಎದುರು  ನಿಶಬ್ದ ಕಾಪಾಡಬೇಕು ಎಂದು ಎನ್ ಜಿಟಿ ನೀಡಿದ್ದ ವಿವಾದಾತ್ಮಕ ಆದೇಶವನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ.

ಈ ಸಂಬಂಧ ಕಳೆದ ವರ್ಷ ಡಿಸೆಂಬರ್ 14 ರಂದು ಎನ್ ಜಿಟಿ ಹೊರಡಿಸಿದ್ದ ಆದೇಶವನ್ನು ಅನುಮೋದಿಸಬಾರದು. ಅದು ಅಮರಾನಾಥ ಗುಹಾಂತರ ದೇವಾಲಯಕ್ಕೆ ಅನ್ವಯವಾಗುವುದಿಲ್ಲ ಎಂದು ಉನ್ನತ ನ್ಯಾಯಾಲಯ ಹೇಳಿದೆ.

 ಅಮರಾನಾಥ ದೇಗುಲದಲ್ಲಿನ   ಪರಿಸರ ಮಾಲಿನ್ಯ ಸಂಬಂಧ  ಕೈಗೊಳ್ಳಬೇಕಾದ ಅಗತ್ಯ ಪ್ರಕ್ರಿಯೆಗಳ ಬಗ್ಗೆ ಸೂಕ್ತ ಅರ್ಜಿ ಸಲ್ಲಿಸುವಂತೆ ದೂರುದಾರರಾದ ಗೌರಿ ಮುಲೇಖಿ  ಅವರಿಗೆ  ನ್ಯಾಯಾಧೀಶರಾದ ಎಂ. ಬಿ. ಲೋಕುರ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠ ತಿಳಿಸಿದೆ.

  ವಿಚಾರಣೆ ವೇಳೆ ಅಮರನಾಥ ದೇವಾಲಯ ಮಂಡಳಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಧಾರ್ಮಿಕ ಶ್ಲೋಕಗಳ ಪಠಣೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದರು.

 ದೇವಾಲಯದವರೆಗೂ ನಡೆಯಲು ಸಾಧ್ಯವಾಗದ ಭಕ್ತಾಧಿಗಳನ್ನು ಏಕೆ ಹೆಲಿಕಾಪ್ಟರ್ ಮೂಲಕ ಡ್ರಾಪ್ ಮಾಡುತ್ತಿಲ್ಲ ಎಂದು ಸುಪ್ರೀಂಕೋರ್ಟ್  ಪೀಠ , ದೇವಾಲಯದಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸಿತು.

ಗುಹೆಯಿಂದ ನಾಲ್ಕು ಕಿಲೋ ಮೀಟರ್ ದೂರದವರೆಗೂ ಹೆಲಿಕಾಪ್ಟರ್ ಮೂಲಕ ಸುಮಾರು 1000 ಜನರನ್ನು ಸಾಗಿಸಲಾಗುತ್ತದೆ . ಆದರೂ, ಇತರ ಕಡೆ  ಭಕ್ತಾಧಿಗಳು ವಿರಾಮಿಸುತ್ತಿರುತ್ತಾರೆ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು.

SCROLL FOR NEXT