ಘಟನಾ ಸ್ಥಳದಲ್ಲಿ ಗುಜರಾತ್ ರಾಜ್ಯ ಪೊಲೀಸರು 
ದೇಶ

ಪತ್ನಿ ಕೊಂದು, ದೇಹವನ್ನು 11 ಭಾಗವಾಗಿ ತುಂಡರಿಸಿದ ಪತಿ!

ಪತ್ನಿಯನ್ನು ಹತ್ಯೆಗೈದ ಪತಿಯೊಬ್ಬ ಬಳಿಕ ಮೃತದೇಹವನ್ನು 11 ಭಾಗವಾಗಿ ತುಂಡರಿಸಿರುವ ಘಟನೆಯೊಂದು ಗುಜರಾತ್ ರಾಜ್ಯದ ಸೂರತ್ ನಲ್ಲಿ ಮಂಗಳವಾರ ನಡೆದಿದೆ...

ಸೂರತ್: ಪತ್ನಿಯನ್ನು ಹತ್ಯೆಗೈದ ಪತಿಯೊಬ್ಬ ಬಳಿಕ ಮೃತದೇಹವನ್ನು 11 ಭಾಗವಾಗಿ ತುಂಡರಿಸಿರುವ ಘಟನೆಯೊಂದು ಗುಜರಾತ್ ರಾಜ್ಯದ ಸೂರತ್ ನಲ್ಲಿ ಮಂಗಳವಾರ ನಡೆದಿದೆ. 
ಶಹನ್ವಾಜ್ ಶೇಕ್ ಪತ್ನಿ ಜುಲೇಕಾ ಎಂಬುವವರನ್ನು ಹತ್ಯೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು 11 ಭಾಗವಾಗಿ ತುಂಡರಿಸಿ ವಿವಿಧ ಭಾಗಗಳಲ್ಲಿ ತುಂಡರಿಸಿದ ದೇಹದ ಭಾಗಗಳನ್ನು ಎಸೆದಿದ್ದಾನೆಂದು ಸಹಾಯಕ ಪೊಲೀಸ್ ಆಯುಕ್ತ ಬಿ.ಎಸ್.ಠಕ್ಕರ್ ಅವರು ಹೇಳಿದ್ದಾರೆ. 
ಶಹನ್ವಾಜ್ ಮೊದಲನೇ ಪತ್ನಿ ಹಾಗೂ ಎರಡನೇ ಪತ್ನಿ ಜುಲೇಖಾ ಜೊತೆಗೆ ಒಂದೇ ಮನೆಯಲ್ಲಿ ವಾಸವಿದ್ದ. ಜುಲೇಕಾ ಆಗಾಗ ಶಹನ್ವಾಜ್ ಮೊದಲನೇ ಪತ್ನಿಯೊಂದಿಗೆ ಜಗಳವಾಡುತ್ತಿದ್ದಳು. ಇದರಿಂದ ತೀವ್ರವಾಗಿ ಬೇಸತ್ತ ಶಹನ್ವಾಜ್ ಜುಲೇಖಾಳನ್ನು ಹತ್ಯೆ ಮಾಡಿದ್ದಾರೆ. 
ಮೃತದೇಹದ ಭಾಗಗಳನ್ನು ಶಹನ್ವಾಜ್ ಬಿಸಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ನೋಡಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆಂದು ಠಕ್ಕರ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ಆಗ VOLVO, ಈಗ BMW; ಹಾರುಬೂದಿ ಸಾಗಿಸುತ್ತಿದ್ದ ಲಾರಿ ಉರುಳಿ ಐಶಾರಾಮಿ ಕಾರು ಅಪ್ಪಚ್ಚಿ, Video

ನೀವು ಪೋಪ್ ಆಗಲು ನಾನು ಕಾರಣ, ರಾಜಕಾರಣ ಬಿಟ್ಟು ಧರ್ಮಗುರುವಿನ ಕೆಲಸ ಮಾಡಿ: ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

SCROLL FOR NEXT