ದೇಶ

ಮಾನಹಾನಿ ಪ್ರಕರಣ; ಕೋರ್ಟ್ ಹೊರಗೆ ಇತ್ಯರ್ಥಪಡಿಸಿಕೊಳ್ಳಿ: ಜೈ ಶಾ, ದಿ ವೈರ್ ಗೆ ಸುಪ್ರೀಂ ಸಲಹೆ

Lingaraj Badiger
ನವದೆಹಲಿ: ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ಕೋರ್ಟ್ ಹೊರಗೆ ಸ್ನೇಹಯುತವಾಗಿ ಇತ್ಯರ್ಥಪಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ದಿ ವೈರ್ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪುತ್ರ ಜೈ ಶಾ ಅವರಿಗೆ ಸಲಹೆ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ, ದಿ ವೈರ್ ವಿರುದ್ಧ ಗುಜರಾತ್ ನ್ಯಾಯಾಲಯದಲ್ಲಿ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ನೀಡಿದ್ದ ತಡೆಯಾಜ್ಞೆಯನ್ನು ಮುಂದುವರೆಸಿದೆ.
ಪ್ರಕರಣದ ವಿಚಾರಣೆಗೂ ಮುನ್ನ, ಇಬ್ಬರೂ ಒಟ್ಟಿಗೆ ಕುಳಿತುಕೊಂಡು ಪರಸ್ಪರ ಮಾತುಕತೆ ಮೂಲಕ ಪ್ರಕರಣ ಬಗೆಹರಿಸಿಕೊಳ್ಳುವಂತೆ ಎರಡೂ ಕಡೆಯ ವಕೀಲರಿಗೆ ತಿಳಿಸಲು ಬಯಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ.
ಮಧ್ಯಂತರ ತಡೆಯಾಜ್ಞೆ ಮುಂದುವರೆಯಲಿದೆ ಹೇಳಿ ಕೋರ್ಟ್, ವಿಚಾರಣೆಯನ್ನು ಜುಲೈ ಮೊದಲ ವಾರಕ್ಕೆ ಮುಂದೂಡಿದೆ.
ಸುಪ್ರೀಂ ಕೋರ್ಟ್ ಕಳೆದ ಮಾರ್ಚ್ 15ರಂದು ದಿ ವೈರ್ ವಿರುದ್ಧದ ಮಾನಹಾನಿ ಪ್ರಕರಣಕ್ಕೆ ತಡೆಯಾಜ್ಞೆ ನೀಡಿತ್ತು.
ಜೈ ಶಾ ನಿರ್ದೇಶಕರಾಗಿರುವ ಟೆಂಪಲ್‌ ಎಂಟರ್‌ಪ್ರೈಸಸ್ ನ ಆದಾಯ ಒಂದು ವರ್ಷದಲ್ಲಿ 50 ಸಾವಿರದಿಂದ 80 ಕೋಟಿ ರುಪಾಯಿಗೆ ಏರಿಕೆಯಾಗಿದೆ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಈ ಕಂಪನಿಯ ಆದಾಯ ವೃದ್ಧಿಯಾಗಿದೆ ಎಂದು ‘ದಿ ವೈರ್‌’ ಸುದ್ದಿತಾಣ ವರದಿ ಮಾಡಿತ್ತು. ಆ ವರದಿ ಬರೆದಿದ್ದ ಪತ್ರಕರ್ತೆ ರೋಹಿಣಿ ಸಿಂಗ್, ದಿ ವೈರ್‌ನ ಸಂಪಾದಕ ಹಾಗೂ ನಿರ್ದೇಶಕರ ವಿರುದ್ಧ ಜಯ್ ಶಾ ₹ 100 ಕೋಟಿಯ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
SCROLL FOR NEXT