ದೇಶ

ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗ: ಸಂತ್ರಸ್ತೆ ಕುಟುಂಬಕ್ಕೆ 12 ಮಾಧ್ಯಮ ಸಂಸ್ಥೆಗಳಿಂದ ತಲಾ 10 ಲಕ್ಷ ನೀಡಲು ಆದೇಶ

Srinivas Rao BV
ನವದೆಹಲಿ: ಜಮ್ಮು-ಕಾಶ್ಮೀರದ ಕಥುವಾದಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಬಾಲಕಿಯ ಗುರುತನ್ನು ಬಹಿರಂಗಪಡಿಸಿದ್ದ ಹಿನ್ನೆಲೆಯಲ್ಲಿ ಸಂತ್ರಸ್ತೆಯ ಕುಟುಂಬಕ್ಕೆ ತಲಾ 10 ಲಕ್ಷ ನೀಡುವಂತೆ 12 ಮಾಧ್ಯಮ ಸಂಸ್ಥೆಗಳಿಗೆ ಕೋರ್ಟ್ ಆದೇಶ ನೀಡಿದೆ. 
ದೆಹಲಿ ಕೋರ್ಟ್ ಈ ಆದೇಶ ನೀಡಿದೆ. " ಕಾನೂನಿನ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ, ಅತ್ಯಾಚರಕ್ಕೊಳಗಾದ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸಬಹುದು ಎಂದು ತಿಳಿದು ಮಾಧ್ಯಮಗಳು ಈ ರೀತಿ ಮಾಡಿವೆ ಎಂದು ಮಾಧ್ಯಮಗಳ ಪರ ವಕೀಲರು ಕೋರ್ಟ್ ನಲ್ಲಿ ಹೇಳಿದ್ದಾರೆ. 
ಆದರೆ ಮಾಧ್ಯಮಗಳಿಂದ ಆಗಿರುವ ತಪ್ಪಿಗೆ ಕ್ಷಮೆ ಕೋರಲಾಗಿರುವ ಹಿನ್ನೆಲೆಯಲ್ಲಿ ಸಂತ್ರಸ್ತೆಯ ಕುಟುಂಬಕ್ಕೆ  ಮಾಧ್ಯಮ ಸಂಸ್ಥೆಗಳು ಒಂದು ವಾರದೊಳಗಾಗಿ ತಲಾ 10 ಲಕ್ಷ ರೂಪಾಯಿ ನೀಡುವಂತೆ ಸೂಚನೆ ನೀಡಿದೆ. 
SCROLL FOR NEXT