ದೇಶ

ಅನುಕಂಪ ಆಧಾರದ ಮೇಲಿನ ನೌಕರರಿಗೆ ಕನಿಷ್ಠ ವಿದ್ಯಾರ್ಹತೆಯನ್ನು ತೆಗೆದುಹಾಕಿರುವ ರೈಲ್ವೆ ಇಲಾಖೆ

Sumana Upadhyaya

ನವದೆಹಲಿ: ಮಾನವೀಯ ನೆಲೆಯಲ್ಲಿ ಸೇವೆಯಲ್ಲಿದ್ದಾಗ ಮೃತರಾದ ಅಥವಾ ವೈದ್ಯಕೀಯ ಕಾರಣಗಳಿಗಾಗಿ ನಿವೃತ್ತರಾದರೆ ಅವರ ಪತ್ನಿ ಅಥವಾ ತಾಯಂದಿರಿಗೆ ಉದ್ಯೋಗ ನೀಡುವಾಗ ಕನಿಷ್ಠ ಶೈಕ್ಷಣಿಕ ವಿದ್ಯಾರ್ಹತೆ ನಿಯಮವನ್ನು ರೈಲ್ವೆ ಸಚಿವಾಲಯ ತೆಗೆದುಹಾಕಿದೆ.

ಈಗಿರುವ ನಿಯಮದ ಪ್ರಕಾರ, ರೈಲ್ವೆ ಇಲಾಖೆಯಲ್ಲಿ ಗ್ರೂಪ್ ಡಿ ನೌಕರರಿಗೆ 10ನೇ ತರಗತಿಯವರೆಗೆ ವಿದ್ಯಾಭ್ಯಾಸವಾಗಬೇಕು. ಇತ್ತೀಚೆಗೆ ರೈಲ್ವೆ ಮಂಡಳಿ ನೀಡಿರುವ ಮಾಹಿತಿ ಪ್ರಕಾರ, ಅನುಕಂಪದ ಆಧಾರದ ಮೇಲೆ ಹಂತ-1ರಲ್ಲಿ ಕೆಲಸ ಪಡೆದವರಿಗೆ ಸಾಮಾನ್ಯ ಕನಿಷ್ಠ ವಿದ್ಯಾಭ್ಯಾಸವಿಲ್ಲ ಎಂದು ಅನೇಕರು ಪ್ರಶ್ನೆ ಕೇಳಿ ವಲಯ ರೈಲ್ವೆಯಿಂದ ಸಂದೇಹಗಳು ಬಂದಿವೆ.

ಈ ಬಗ್ಗೆ ಚರ್ಚೆ ನಡೆಸಿದ ಬಳಿಕ ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ತೆಗೆದುಹಾಕಲು ಮಂಡಳಿ ನಿರ್ಧರಿಸಿದೆ ಎಂದು ಹೇಳಿದೆ.

SCROLL FOR NEXT