ದೇಶ

ಎನ್ಐಎಗೆ ಕುರುಡು ಮತ್ತು ಕಿವುಡು; ಮೆಕ್ಕಾ ಮಸೀದಿ ಸ್ಫೋಟದ ಸಂತ್ರಸ್ತರಿಗೆ ಸಹಾಯ ಮಾಡುವೆ: ಓವೈಸಿ

Srinivas Rao BV
ಹೈದರಾಬಾದ್: ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ತನಿಖೆಯನ್ನು ಎನ್ಐಎ ದಾರಿ ತಪ್ಪಿಸಿದೆ ಎಂದು ಎಂಐಎಂ ಶಾಸಕ ಅಸಾವುದ್ದೀನ್ ಓವೈಸಿ ಎನ್ಐಎಗೆ ಕುರುಡು, ಕಿವುಡು ಎಂದು ಲೇವಡಿ ಮಾಡಿದ್ದಾರೆ. 
ಇದೇ ವೇಳೆ 2007 ರ ಸ್ಫೋಟ ಪ್ರಕರಣದ ಸಂತ್ರಸ್ತರ ಕುಟುಂಬದವರು ಸೋಮವಾರ ಬಂದ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾದರೆ ನಾನು ನೆರವು ನೀಡುತ್ತೇನೆ ಎಂದೂ ಭರವಸೆ ನೀಡಿದ್ದಾರೆ.
ಎನ್ಐಎನ್ನು ಪಂಜರದ ಗಿಣಿ ಎಂದು ಹೇಳಲಾಗುತ್ತದೆ. ಆದರೆ ಅದು ಪಂಜರದ ಗಿಣಿಯಷ್ಟೇ ಅಲ್ಲ, ಕುರುಡು, ಕಿವುಡು ಸಂಸ್ಥೆ ಎಂದು ಹೇಳಿದ್ದಾರೆ. ಎನ್ಐಎ ಉದ್ದೇಶಪೂರ್ವಕವಾಗಿ ಪ್ರಕರಣದ ತನಿಖೆಯ ದಿಕ್ಕನ್ನು ತಪ್ಪಿಸಿದೆ. ಪ್ರಕರಣದ ಆರೋಪಿಗಳನ್ನು ದೋಷಮುಕ್ತಗೊಳಿಸುವಂತೆಯೇ ಎನ್ಐಎ ತನಿಖೆ ನಡೆಸಿದೆ. 
ಅಪರಾಧವನ್ನು ಸಾಬೀತುಪಡಿಸುವುದು ಪ್ರಾಸಿಕ್ಯೂಷನ್ ನ ಕರ್ತವ್ಯವಾದ್ದರಿಂದ ಕೋರ್ಟ್ ಬಗ್ಗೆ ನಾನು ಯಾವುದೇ ಆರೋಪ ಮಾಡುವುದಿಲ್ಲ ಎಂದು ಓವೈಸಿ ಹೇಳಿದ್ದಾರೆ. 
2007 ರಲ್ಲಿ ನಡೆದಿದ್ದ ಹೈದರಾಬಾದ್ ನ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ 10 ಆರೋಪಿಗಳನ್ನು ಎನ್ಐಎ ಕೋರ್ಟ್ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿತ್ತು.
SCROLL FOR NEXT