ದೇಶ

ಮೆಕ್ಕಾ ಮಸೀದಿ: ಮರು ತನಿಖೆಗೆ ಕೇಂದ್ರದ ಮೇಲೆ ಒತ್ತಡ ಹೇರಿ- ತೆಲಂಗಾಣ ರಾಜ್ಯಪಾಲರಿಗೆ ಓವೈಸಿ

Manjula VN
ಹೈದರಾಬಾದ್; ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ ಸಂಬಂಧ ಮರು ತನಿಖೆ ನಡೆಸುವಂತೆ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿಕೊಳ್ಳುವಂತೆ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ರಾಜ್ಯಪಾಲ ಇ.ಎಸ್.ಎಲ್.ನರಸಿಂಹನ್ ಅವರಿಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಗುರುವಾರ ಹೇಳಿದ್ದಾರೆ. 
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಮಸೀದಿ ಸ್ಫೋಟ ಪ್ರಕರಣ ಸಂಬಂಧ ನಮ್ಮ ನೋವುಗಳನ್ನು ಕೇಂದ್ರಕ್ಕೆ ಅರ್ಥೈಸುವುದಲ್ಲದೆ, ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಮನವಿ ಮಾಡಿಕೊಳ್ಳಿ ಅಥವಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ, ಉನ್ನತ ನ್ಯಾಯಾಲಯ ಮೆಟ್ಟಿಲೇರಿ ಎಂದು ತೆಲಂಗಾಣ ರಾಜ್ಯಪಾಲರಿಗೆ ಹೇಳಿದ್ದಾರೆ. 
ಏಪ್ರಿಲ್.16 ರಂದು ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ ಸಂಬಂಧ ತೀರ್ಪು ನೀಡಿದ್ದ ನಾಂಪಲ್ಲಿಯಲ್ಲಿರುವ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು, ಎಲ್ಲಾ ಐದು ಆರೋಪಿಗಳನ್ನು ಖುಲಾಸೆಗೊಳಿಸಿತ್ತು. 
2007ರ ಮೇ.18 ರಂದು ಹೈದರಾಬಾದ್ ನಲ್ಲಿರುವ ಅತ್ಯಂತ ಹಳೆಯ ಮೆಕ್ಕಾ ಮಸೀದಿಯಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 8ಮಂದಿ ಸಾವನ್ನಪ್ಪಿ, 58ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. 
SCROLL FOR NEXT