ದೇಶ

ಉನ್ನಾವೋ ಅತ್ಯಾಚಾರ ಪ್ರಕರಣ: ಕುಲ್ದೀಪ್ ಸೆಂಗಾರ್'ಗೆ ನೀಡಲಾಗಿದ್ದ ಭದ್ರತೆ ವಾಪಸ್ ಪಡೆದ ಸರ್ಕಾರ

Manjula VN
ಲಖನೌ: ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್ ಅವರಿಗೆ ನೀಡಲಾಗಿದ್ದ ವೈ ಶ್ರೇಣಿ ಭದ್ರತೆಯನ್ನು ಉತ್ತರಪ್ರದೇಶ ಸರ್ಕಾರ ಶುಕ್ರವಾರ ಹಿಂದಕ್ಕೆ ಪಡೆದುಕೊಂಡಿದೆ.
11 ಭದ್ರತಾ ಸಿಬ್ಬಂದಿಗಳೊಂದಿಗೆ ಕೂಡಿರುವ ವೈ ಶ್ರೇಣಿಯ ಭದ್ರತೆಯನ್ನು ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್ ಅವರಿಗೆ ನೀಡಲಾಗಿತ್ತು. 
18 ವರ್ಷದ ಯುವತಿ ಮೇಲೆ ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಅತ್ಯಾಚಾರ ಮಾಡಿದ ಆರೋಪದಲ್ಲಿ ಕುಲ್ದೀಪ್ ಸಿಂಗ್ ಅವರು ಸಿಬಿಐ ನಿಂದ ಬಂಧನಕ್ಕೊಳಗಾಗಿದ್ದಾರೆ. ಪ್ರಸ್ತುತ ಶಾಸಕನ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 
ಶಾಸಕನ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದು, ಬಂಧನಕ್ಕೊಳಗಾಗಿರುವ ಹಿನ್ನಲೆಯಲ್ಲಿ ಭದ್ರತೆ ಕುರಿತಂತೆ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಉತ್ತರಪ್ರದೇಶ ಸರ್ಕಾರ ಭದ್ರತೆಯನ್ನು ಹಿಂದಕ್ಕೆ ಪಡೆದುಕೊಂಡಿದೆ. 
ವೈ ಶ್ರೇಣಿಯ ಭದ್ರತೆಯಲ್ಲಿ 2 ರೀತಿಯ ವ್ಯವಸ್ಥೆ ಇದ್ದು, ಮೊದಲನೆಯ ಶ್ರೇಣಿಯಲ್ಲಿ ಸಚಿವರು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೆ ಭದ್ರತೆ ನೀಡಲಾಗುತ್ತದೆ. ಯಾವುದೇ ಉಗ್ರ ಸಂಘಟನೆಗಳಿಂದ ಬೆದರಿಕೆ ಇದೆ ಎಂಬುದು ಗೊತ್ತಾದಲ್ಲಿ 2ನೇ ಶ್ರೇಣಿಯ ಭದ್ರತೆಯನ್ನು ನೀಡಲಾಗುತ್ತದೆ. 
SCROLL FOR NEXT