ಸಿಜೆಐ ದೀಪಕ್ ಮಿಶ್ರಾ 
ದೇಶ

ನ್ಯಾಯಾಂಗ ಕೆಲಸ ಹಾಗೂ ಆಡಳಿತದಿಂದ ಸಿಜೆಐ ತನನ್ನು ತಾನೂ ರಕ್ಷಿಸಿಕೊಳ್ಳುವಂತಿಲ್ಲ

ಸುಪ್ರೀಂಕೋರ್ಟಿನ ನ್ಯಾಯಾಂಗ ಕೆಲಸ ಹಾಗೂ ಆಡಳಿತದಿಂದ ತನ್ನನ್ನು ತಾನೂ ರಕ್ಷಿಸಿಕೊಳ್ಳುವಂತಿಲ್ಲ ಎಂಬುದನ್ನು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅರಿತಿದ್ದಾರೆ ಎಂಬಂತಹ ಮಾಹಿತಿ ತಿಳಿದುಬಂದಿದೆ.

ನವದೆಹಲಿ :  ಸುಪ್ರೀಂಕೋರ್ಟಿನ ನ್ಯಾಯಾಂಗ ಕೆಲಸ ಹಾಗೂ ಆಡಳಿತದಿಂದ ತನ್ನನ್ನು ತಾನೂ ರಕ್ಷಿಸಿಕೊಳ್ಳುವಂತಿಲ್ಲ ಎಂಬುದನ್ನು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅರಿತಿದ್ದಾರೆ ಎಂಬಂತಹ ಮಾಹಿತಿ ತಿಳಿದುಬಂದಿದೆ.

ಕಾಂಗ್ರೆಸ್ ನೇತೃತ್ವದ ಮಿತ್ರ  ಪಕ್ಷಗಳು ರಾಜ್ಯಸಭೆಯಲ್ಲಿ ಸಿಜೆಐ ವಿರುದ್ಧ ಮಂಡಿಸಿರುವ ಮಹಾಭೀಯೋಗ ನಿಲುವಳಿ ಸೂಚನೆ ವಿರುದ್ಧ ಹಲವು ಹಿರಿಯ ವಕೀಲರು ದೀಪಕ್ ಮಿಶ್ರಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬಂತಹ ಮಾಹಿತಿ ಸುಪ್ರೀಂಕೋರ್ಟ್ ಮೂಲಗಳಿಂದ ತಿಳಿದುಬಂದಿದೆ.

ತಮ್ಮ ವಿರುದ್ಧದ ಆರೋಪಗಳು ನಿರಾಧಾರಾವಾದದ್ದು, ರಾಜಕೀಯ ಹಿತಸಕ್ತಿಯಿಂದ ಸಿಜೆಐ  ಹುದ್ದೆಯಿಂದ ತೆರವುಗೊಳಿಸಲು ಯತ್ನಿಸಲಾಗುತ್ತಿದೆ,ಸಂಶಯಾಸ್ಪದ ರೀತಿಯಲ್ಲಿ ತಮ್ಮನ್ನು ತೆರವುಗೊಳಿಸುವ ಕ್ರಮಕ್ಕೆ ವಿಧೇಯರಾಗಲಿದರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್ ಮೈತ್ರಿಯ ವಕೀಲರಾದ ಮಾಜಿ ಅಟಾರ್ನಿ ಜನರಲ್ ಕೆ, ಪರಸರನ್, ಅವರ ಮಗ ಮೋಹನ್,  ಮಾಜಿ ಸಾಲಿಸಿಟರ್ ಜನರಲ್  ಮಹಾಲಕ್ಷ್ಮಿ ಪವಾನಿ, ಮತ್ತಿತರರು ದೀಪಕ್ ಮಿಶ್ರಾ ಅವರನ್ನು ಬೆಂಬಲಿಸಿದ್ದು, ಅವರು ಯಾವುದೇ ರೀತಿಯ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ.

ಒಂದು ವೇಳೆ  ಮಹಾಭಿಯೋಗ ನಿಲುವಳಿ ಸೂಚನೆಯಡಿ ರಾಜ್ಯಸಭೆ ಸಭಾಪತಿಗಳು ಸಿಜಿಐನ ನಿಲುವನ್ನು ಬದಲಿಸಬಹುದು. ಆದರೆ. ಅವರ ಅಧಿಕಾರವಧಿ ಮುಗಿಯುವವರೆಗೂ ನ್ಯಾಯಾಂಗ ಕಾರ್ಯ ಹಾಗೂ ಆಡಳಿತವನ್ನು ಮುಂದುವರೆಸಿಕೊಂಡು ಹೋಗಲಿದ್ದಾರೆ ಎಂದು ಮೂಲಗಳು ಹೇಳುತ್ತವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ