ಅಯೋಧ್ಯೆ: ವಿಶ್ವಹಿಂದೂ ಪರಿಷತ್ ನ ನೂತನ ಅಧ್ಯಕ್ಷ ವಿಷ್ಣು ಸದಾಶಿವ ಕೋಕ್ಜೆ ಏ.23 ರಂದು ಅಯೋಧ್ಯೆಗೆ ಭೇಟಿ ನೀಡಿದ್ದು, ಶೀಘ್ರವೇ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದ್ದಾರೆ.
ನಿವೃತ್ತ ನ್ಯಾಯಾಧೀಶರಾಗಿರುವ ಸದಾಶಿವ ಕೋಕ್ಜೆ, ಅಯೋಧ್ಯೆ ಭೇಟಿ ವೇಳೆ, ಸ್ಥಳೀಯ ದೇವಾಲಯದ ಅರ್ಚಕರೊಂದಿಗೂ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಮಜನ್ಮ ಭೂಮಿ ನ್ಯಾಸ್ ನ ಪದಾಧಿಕಾರಿಗಳೂ ಇದ್ದರು ಎಂದು ವಿಹೆಚ್ ಪಿ ಕಚೇರಿ ತಿಳಿಸಿದೆ.
ಇದೇ ವೇಳೆ ರಾಮ ಮಂದಿರಕ್ಕಾಗಿ ಈಗಾಗಲೇ ಕಲ್ಲಿನ ಕೆತ್ತನೆಗಳು ನಡೆಯುತ್ತಿರುವ ಪ್ರದೇಶಕ್ಕೂ ವಿಹೆಚ್ ಪಿ ಅಧ್ಯಕ್ಷರು ಭೇಟಿ ನೀಡಿದ್ದಾರೆ. ಅಯೋಧೆಗೆ ಭೇಟಿ ನೀಡುವುದಕ್ಕೂ ಮುನ್ನ ರಾಮ ಮಂದಿರ ನಿರ್ಮಾಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವಿಹೆಚ್ ಪಿ ಅಧ್ಯಕ್ಷರು ಮುಸ್ಲಿಮರೂ ರಾಮ ಮಂದಿರ ನಿರ್ಮಾಣದ ಪರವಾಗಿದ್ದಾರೆ ಎಂದು ಹೇಳಿದ್ದರು.