ನವದೆಹಲಿ: ಗಲ್ಲು ಹಾಕುವುದು ಮರಣ ದಂಡನೆ ಶಿಕ್ಷೆ ಜಾರಿಗೊಳಿಸುವುದಕ್ಕೆ ಇರುವ ಸುರಕ್ಷಿತ ಹಾಗೂ ತ್ವರಿತ ರೀತಿಯ ವಿಧಾನ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಮರಣ ದಂಡನೆ ಶಿಕ್ಷೆ ಜಾರಿಗೊಳಿಸುವುದಕ್ಕೆ ಗಲ್ಲು ವಿಧಿಸುವ ಬದಲು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲು ನಿರ್ದೇಶನ ನೀಡಬೇಕೆಂದು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಈ ಹೇಳಿಕೆ ನೀಡಿದೆ.
ಫೈರಿಂಗ್ ಸ್ಕ್ವಾಡ್ ಅಥವಾ ಮಾರಕ ಚುಚ್ಚುಮದ್ದುಗಳಿಗಿಂತ ಗಲ್ಲು ಶಿಕ್ಷೆ ಮರಣದಂಡನೆಗೆ ಸುರಕ್ಷಿತ ಹಾಗೂ ತ್ವರಿತಗತಿಯ ವಿಧಾನ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. ಸುಪ್ರೀಂ ಕೋರ್ಟ್ ನ ವ್ವಕೀಲರಾದ ರಿಷಿ ಮಲ್ಹೋತ್ರ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲು ನಿರ್ದೇಶನ ನೀಡಬೇಕೆಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.