ದೇಶ

ಅಸಾರಾಂ ಹೆಸರಿನ ಸ್ಥಳಗಳಿಗೆ ಶೀಘ್ರ ಮರುನಾಮಕರಣ: ಮಧ್ಯಪ್ರದೇಶ ಸಿಎಂ

Lingaraj Badiger
ಭೋಪಾಲ್: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸ್ವಯಂಘೋಷಿತ ದೇವ ಮಾನವ ಅಸರಾಂ ಬಾಪು ಅವರ ಹೆಸರಿನಲ್ಲಿರುವ ಸ್ಥಳಗಳಿಗೆ ಶೀಘ್ರದಲ್ಲೇ ಮರು ನಾಮಕರಣ ಮಾಡುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಬುಧವಾರ ಹೇಳಿದ್ದಾರೆ.
ಯಾರೂ ಕೂಡ ಕಾನೂನಿಗಿಂತ ದೊಡ್ಡವರಲ್ಲ. ಕಾರ್ಯಕರ್ತರ ಬೇಡಿಕೆಯಂತೆ ಭೋಪಾಲ್ ನಲ್ಲಿರುವ ಎರಡು ಸ್ಥಳಗಳ ಹೆಸರನ್ನು ಬದಲಾಯಿಸಲಾಗುವುದು ಎಂದು ಜೋಧ್ ಪುರ್ ಕೋರ್ಟ್ 77 ವರ್ಷದ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿದ ಬಳಿಕ ಶಿವರಾಜ್ ಸಿಂಗ್ ಚೌವ್ಹಾಣ್ ತಿಳಿಸಿದ್ದಾರೆ.
ಭೋಪಾಲ್ ದಲ್ಲಿ ಅಸಾರಾಂ ಹೆಸರಿನಲ್ಲಿ ಒಂದು ರಸ್ತೆ ಮತ್ತು ಬಸ್ ನಿಲ್ದಾಣವಿದ್ದು, ಈ ಎರಡೂ ಸ್ವಯಂಘೋಷಿತ ದೇವಮಾನವನ ಆಶ್ರಮದ ಬಳಿಯೇ ಇವೆ.
ಅಸಾರಾಂ ಬಾಪುಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದ ಬಳಿಕ ಸಾಮಾಜಿಕ ಕಾರ್ಯಕರ್ತೆ ರಚನಾ ದಿಂಗ್ರಾ ಎಂಬುವವರು, ಮಕ್ಕಳ ಹಕ್ಕುಗಳ ದೊಡ್ಡ ರಕ್ಷಕ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು ಭೋಪಾಲ್ ಈ ಎರಡು ಸ್ಥಳಗಳ ಹೆಸರು ಬದಲಾಯಿಸುತ್ತಾರೆಯೇ? ಎಂದು ವಿಡಿಯೋ ಮೂಲಕ ಸಾಮಾಜಿಕ ತಾಣದಲ್ಲಿ ಪ್ರಶ್ನಿಸಿದ್ದರು. 
ಮತ್ತೊಬ್ಬ ಕಾರ್ಯಕರ್ತ ಅಕ್ಷಯ್ ಹಂಕ್ ಅವರು ಮುಖ್ಯಮಂತ್ರಿಗಳನ್ನು ಟ್ಯಾಗ್ ಮಾಡಿ, ದಿಂಗ್ರಾ ಬೇಡಿಕೆ ಬಗ್ಗೆ ಸರ್ಕಾರ ತನ್ನ ನೀಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸೂಕ್ತ ಕ್ರಮದ ಭರವಸೆ ನೀಡಿದ್ದರು.
SCROLL FOR NEXT