ಐಶ್ವರ್ಯಾ ರೈ ಮತ್ತು ಬಿಪ್ಲಬ್ ಕುಮಾರ್ ದೇಬ್ 
ದೇಶ

ಭಾರತೀಯ ಮಹಿಳೆಯನ್ನು ಪ್ರತಿನಿಧಿಸುವುದು ಐಶ್ವರ್ಯಾ ರೈ, ಡಯಾನಾ ಹೇಡನ್ ಅಲ್ಲ: ತ್ರಿಪುರಾ ಸಿಎಂ

ಭಾರತೀಯ ಮಹಿಳೆಯರನ್ನು ಪ್ರತಿನಿಧಿಸುವುದು ಐಶ್ವರ್ಯಾ ರೈ ಅವರೇ ಹೊರತು ಮಾಜಿ ವಿಶ್ವ ಸುಂದರಿ ಡಯನಾ ಹೇಡನ್ ಅಲ್ಲ...

ಅಗರ್ತಲಾ: ಭಾರತೀಯ ಮಹಿಳೆಯರನ್ನು ಪ್ರತಿನಿಧಿಸುವುದು ಐಶ್ವರ್ಯಾ ರೈ ಅವರೇ ಹೊರತು ಮಾಜಿ ವಿಶ್ವ ಸುಂದರಿ ಡಯನಾ ಹೇಡನ್ ಅಲ್ಲ ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಗರ್ತಲಾದ ಪ್ರಾಜ್ಞ ಭವನದಲ್ಲಿ ಏರ್ಪಡಿಸಿದ್ದ ಕರಕುಶಲ ವಿನ್ಯಾಸ ಮತ್ತು ಕೈಮಗ್ಗ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಐಶ್ವರ್ಯಾ ರೈ ಅಪ್ರತಿಮ ಸೌಂದರ್ಯವಂತೆ, ಅವರು ಭಾರತೀಯ ಮಹಿಳೆಯರ ಪ್ರತಿನಿಧಿ, ಆದರೆ ಡಯಾನಾ ಹೇಡನ್ ಹೇಗಾಗುತ್ತಾರೆ ಎಂದು ಪ್ರಶ್ನಿಸಿದ್ದಾರೆ. 
ಹಿಂದಿನ ಕಾಲದ ನಮ್ಮ ಮಹಿಳೆಯರು ಶಾಂಪೂ, ಹಾಗೂ ಸೌಂದರ್ಯ ವರ್ಧಕಗಳನ್ನು ಬಳಸುತ್ತಿರಲಿಲ್ಲ, ಅವರು ತಮ್ಮ ತಲೆ ಕೂದಲನ್ನು ಮೇಥಿ ನೀರಿನಿಂದ ತೊಳೆಯಿತ್ತಿದ್ದರು.  ಹಾಗೂ ಮಣ್ಣಿನಿಂದ ಸ್ನಾನ ಮಾಡುತ್ತಿದ್ದರು. ಆದರೇ ಇಂದು ದೇಶದ ಪ್ರತಿಯೊಂದು ಮೂಲೆಯಲ್ಲಿಯೂ ಬ್ಯೂಟಿ ಪಾರ್ಲರ್ ಇವೆ ಎಂದು ಅವರು ಹೇಳಿದ್ದಾರೆ.
ನಾವು ಮಹಿಳೆಯರಲ್ಲಿ ಲಕ್ಷ್ಮಿ, ಸರಸ್ವತಿ ಅವರನ್ನು ಕಾಣುತ್ತೇವೆ, ಐಶ್ವರ್ಯಾ ರೈ  ಮಿಸ್ ವರ್ಲ್ಡ್ ಆಗಿದ್ದವರು,  ಭಾರತೀಯ ಮಹಿಳೆಯರನ್ನು ಪ್ರತಿನಿಧಿಸುವ ಎಲ್ಲಾ ಹಕ್ಕು ಅವರಿಗಿದೆ, ಆದರೇ ಡಯಾನಾ ಹೇಡನ್ ಗೆ ಯಾವ ಸೌಂದರ್ಯವಿದೆ ಎಂಬುದು ನನಗೆ ಅರ್ಥವಾಗಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT