ಗೂಗಲ್ ಡೂಡಲ್ 
ದೇಶ

ಜ್ಞಾನಪೀಠ ಪುರಸ್ಕೃತೆ ಮಹಾದೇವಿ ವರ್ಮಾಗೆ ಗೂಗಲ್ ಡೂಡಲ್ ನಮನ

ಜ್ಞಾನಪೀಠ ಪುರಸ್ಕೃತ ಕವಯತ್ರಿ, ಸ್ವಾತಂತ್ರ ಹೋರಾಟಗಾರ್ತಿ, ಮಹಿಳಾ ಹಕ್ಕು ಪ್ರತಿಪಾದಕಿ ಮಹಾದೇವಿ ವರ್ಮಾ ಜನ್ಮದಿನದ ನಿಮಿತ್ತ ಗೂಗಲ್ ಡೂಡಲ್‍ ಇಂದು ...

ನವದೆಹಲಿ: ಜ್ಞಾನಪೀಠ ಪುರಸ್ಕೃತ ಕವಯತ್ರಿ, ಸ್ವಾತಂತ್ರ ಹೋರಾಟಗಾರ್ತಿ, ಮಹಿಳಾ ಹಕ್ಕು ಪ್ರತಿಪಾದಕಿ ಮಹಾದೇವಿ ವರ್ಮಾ  ಜನ್ಮದಿನದ ನಿಮಿತ್ತ ಗೂಗಲ್ ಡೂಡಲ್‍ ಇಂದು ಅವರ ಚಿತ್ರವನ್ನು ಪ್ರಕಟಿಸಿ ವಿಶೇಷ ಗೌರವ ಸಲ್ಲಿಸಿದೆ.
ಡೂಡಲ್‌ನಲ್ಲಿ ಅವರನ್ನು ಡೈರಿ ಮತ್ತು ಪೆನ್ ಹಿಡಿದುಕೊಂಡು ಗಹನವಾದ ಚಿಂತನೆಯಲ್ಲಿ ಮುಳುಗಿರುವಂತೆ ಚಿತ್ರಿಸಲಾಗಿದೆ. ಅತಿಥಿ ಕಲಾವಿದ ಸೋನಾಲಿ ಜೋಹ್ರಾ ಈ ಚಿತ್ರ ಬರೆದಿದ್ದಾರೆ. 
ಆಧುನಿಕ ಮೀರಾ ಎಂದೇ ಪ್ರಖ್ಯಾತರಾಗಿರುವ ವರ್ಮಾ ಮಾರ್ಚ್ 26, 1907ರಲ್ಲಿ ಫರುಖಾಬಾದ್‌ನಲ್ಲಿ ಜನಿಸಿದ್ದರು. 9ನೇ ವಯಸ್ಸಿಗೆ ಮದುವೆಯಾಗಿದ್ದ ಅವರು ತಂದೆ-ತಾಯಿಗಳ ಪ್ರೋತ್ಸಾಹದೊಂದಿಗೆ ತವರಿನಲ್ಲಿದ್ದುಕೊಂಡೇ ತಮ್ಮ ಶಿಕ್ಷಣವನ್ನು ಮುಂದುವರಿಸಿ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. 
ಭಾರತೀಯ ಸಾಹಿತ್ಯಕ್ಕೆ ಅವರು ನೀಡಿದ ಅನುಪಮ ಸೇವೆಯನ್ನು ಪರಿಗಣಿಸಿ 1982ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 1956ರಲ್ಲಿ ಪದ್ಮ ಭೂಷಣ, 1979ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಮತ್ತು 1988ರಲ್ಲಿ ಪದ್ಮ ವಿಭೂಷಣದಿಂದ ಸನ್ಮಾನಿತರಾಗಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ನಿಂದ 550ಕ್ಕೂ ಹೆಚ್ಚು ಭಾರತೀಯರ ಸ್ಥಳಾಂತರ; ಗಲ್ಫ್‌ನಿಂದ 20,000 ಜನ ಭಾರತಕ್ಕೆ ವಾಪಸ್

ವಿಧಾನಸಭೆ ಕಲಾಪ: ಸ್ಪೀಕರ್ ಯುಟಿ ಖಾದರ್ ಸಿಟ್ಟಿಗೆ ಮೂವರು ಅಧಿಕಾರಗಳ ತಲೆದಂಡ!

Video: 390 ಕೆಜಿ ತಂಬಾಕು ಅಕ್ರಮ ರವಾನೆ, ಪ್ರಶ್ನಿಸಿದ ಪೊಲೀಸ್ ಅನ್ನೇ ಕಾರಿನ ಬಾನೆಟ್ ಮೇಲೆ ಎಳೆದೊಯ್ದ ಭೂಪ!

West Asia conflict: ದುಬೈ ಏರ್‌ಪೋರ್ಟ್‌ ಬಳಿ ಡ್ರೋನ್‌ ದಾಳಿ; ವಿಮಾನ ಸಂಚಾರ ತಾತ್ಕಾಲಿಕ ಸ್ಥಗಿತ, 'Hormuz' ರಕ್ಷಣೆಗೆ NATO ನೆರವು ಕೋರಿದ ಟ್ರಂಪ್

ಆಪರೇಷನ್ ಸಿಂಧೂರ್ ಬಗ್ಗೆ ಪೋಸ್ಟ್‌: ಪ್ರೊ ಅಲಿ ಖಾನ್ ವಿರುದ್ಧದ ಕೇಸ್ ಕೈಬಿಟ್ಟ ಹರಿಯಾಣ ಸರ್ಕಾರ

SCROLL FOR NEXT