ದೇಶ

ಅಲಿಘಡ ವಿವಿನಲ್ಲಿ ಶಾಖೆ ತೆರೆಯಲು ಆರ್ ಎಸ್ ಎಸ್ ಮನವಿ, ಕಾರ್ಯಕರ್ತರಿಂದ ಉಪಕುಲಪತಿಗೆ ಪತ್ರ

Raghavendra Adiga
ನವದೆಹಲಿ: ಅಲಿಘಡ ಮುಸ್ಲಿಂ ವಿಶ್ವವಿದ್ಯಾನಿಕಯದ ಕ್ಯಾಂಪಸ್ ಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ಶಾಖೆಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ಕೋರಿ ವಿಶ್ವವಿದ್ಯಾನಿಲಯ ಉಪಕುಲಪತಿಗಳಿಗೆ ಆರ್ ಎಸ್ ಎಸ್ ಪತ್ರ ಬರೆದಿದೆ.
ಸಂಘದ ಕಾರ್ಯಕರ್ತರಾದ ಅಮೀರ್ ರಶೀದ್ ಉಪಕುಲಪತಿಗಳಿಗೆ ಪತ್ರ ಬರೆದಿದ್ದು  ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಲ್ಲಿ  ಆರ್ ಎಸ್ ಎಸ್ ಕುರಿತಾದ ತಪ್ಪು ಕಲ್ಪನೆ ಹೋಗಲಾಡಿಸಲು ವಿಶ್ವ ವಿದ್ಯಾನಿಕಯದ ಕ್ಯಾಂಪಸ್ ನಲ್ಲಿ ಶಾಖೆಗೆ ಅನುಮತಿ ನೀಡಬೇಕೆಂದು ಕೋರಿದ್ದಾರೆ.
ಸಂಘದ ಕೆಲಸ, ಆದ್ಯತೆಗಳ ಬಗ್ಗೆ ಎಎಂಯು ವಿದ್ಯಾರ್ಥಿಗಳು ತಿಳಿಸಬೇಕಿದೆ. ಆರ್ ಎಸ್ ಎಸ್ ಮುಸ್ಲೀಂ ವಿರೋಧಿ ಎಂದು ತಪ್ಪು ಕಲ್ಪನೆ ಇದೆ, ನಿಜವಾಗಿ ಇದೊಂದು  ರಾಷ್ಟ್ರೀಯತಾವಾದಿ ಸಂಘಟನೆಯಾಗಿದೆ. 'ಶಾಖೆ’ ಪ್ರಾರಂಭಿಸುವುದರಿಂದ ವಿದ್ಯಾರ್ಥಿಗಳಿಗೆ ಆರ್ ಎಸ್ ಎಸ್ ಎಂದರೇನೆಂದು ತಿಳಿಯುತ್ತದೆ" ಅವರು ಪತ್ರದಲ್ಲಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಯಿಸಿರುವ  ಆಲಿಗಢ ಮುಸ್ಲಿಂ ವಿವಿ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಮಶ್ಕೂರ್ ಅಹ್ಮದ್‌ ಉಸ್ಮಾನಿ ಆರ್ ಎಸ್ ಎಸ್ ದೇಶವನ್ನು ವಿಭಜಿಸುತ್ತದೆ. ಇದು ಶೈಕ್ಷಣಿಕ  ಸಂಸ್ಥೆಯಾಗಿದೆ ಹೊರತೆ ರಾಜಕೀಯ ಸಂಸ್ಥೆಯಲ್ಲ. ನಾವು ಇದನ್ನು ವಿರೋಧಿಸುತ್ತೇವೆ ಎಂದಿದ್ದಾರೆ.
ವಿಶ್ವವಿದ್ಯಾನಿಕಯ ಸಾರ್ವಜನ್ಕ ಸಂಪರ್ಕಾಧಿಕಾರಿ ಸೈಫಿ ಕಿದ್ವಾಯಿ ಪತ್ರದ ಕುರಿತಂತೆ ನಮಗೆ ಯಾವ ನಿಖರ ಮಾಹಿತಿ ಬಂದಿಲ್ಲ. ಹಾಗೊಂದುವೇಳೆ ಅವರೇನಾದರೂ ಮನವಿ ಮಾಡಿದರೆ ಅದರ ಕುರಿತಂತೆ ಉಪಕುಲಪತಿಗಳೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
SCROLL FOR NEXT