ನವದೆಹಲಿ: ಕಥುವಾ ಅತ್ಯಾಚಾರ ಪ್ರಕರಣ ವಿಚಾರಣೆಯನ್ನು ಚಂಡೀಗಢಕ್ಕೆ ವರ್ಗಾಯಿಸಬೇಕು, ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು ಎನ್ನುವ ಮನವಿ ಸ್ವೀಕರಿಸಿದ ಸರ್ವೋಚ್ಚ ನ್ಯಾಯಾಲಯ ಮೇ 7 ರವರೆಗೆ ವಿಚಾರಣೆಗೆ ತಡೆ ನೀಡಿದೆ.
ವಿಚಾರಣೆಯನ್ನು ಚಂಡೀಗಢಕ್ಕೆ ವರ್ಗಾವಣೆಗೊಳಿಸುವುದು, ಪ್ರಕರಣವನ್ನು ಸಿಬಿಐಗೆ ವಹಿಸುವುದರ ಸಂಬಂಧ ಸಂತ್ರಸ್ತೆಯ ತಂದೆ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ಪರಿಶೀಲಿಸಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ, ಇಂದು ಮಲ್ಹೋತ್ರಾ ಅವರಿದ್ದ ನ್ಯಾಯಪೀಠ ಹೇಳಿದೆ/
ಪ್ರಕರಣದ ಮುಂದಿನ ವಿಚಾರಣೆ ಮೇ 7ರಂದು ನಡೆಯಲಿದೆ.
ಅಲ್ಪಸಂಖ್ಯಾತ ಅಲೆಮಾರಿ ಮುಸ್ಲಿಮ್ ಸಮುದಾಯಕ್ಕೆ ಸೇರಿದ್ದ 8 ವರ್ಷದ ಬಾಲಕಿ ಜಮ್ಮು ಕಾಶ್ಮೀರದ ಕಥುವಾ ಬಳಿ ಹಳ್ಳಿಯೊಂದರಿಂದ ಜನವರಿ 10ರಂದು ಕಣ್ಮರೆಯಾಗಿದ್ದಳು. ಇದಾಗಿ ಒಂದು ವಾರದ ಬಳಿಕ ಮಗುವಿನ ಮೃತದೇಹ ಅದೇ ಪ್ರದೇಶದಲ್ಲಿ ಪತ್ತೆಯಾಗಿತ್ತು.