ಸುಲಿಗೆ ಪ್ರಕರಣ: ಅಬು ಸಲೀಂ ವಿರುದ್ಧದ ತೀರ್ಪು ಪ್ರಕಟಣೆ ಮತ್ತೆ ವಿಳಂಬ 
ದೇಶ

ಸುಲಿಗೆ ಪ್ರಕರಣ: ಅಬು ಸಲೀಂ ವಿರುದ್ಧದ ತೀರ್ಪು ಪ್ರಕಟಣೆ ಮತ್ತೆ ವಿಳಂಬ

1993 ರ ಮುಂಬಯಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಅಬು ಸೇಲಂ ಮೇಲಿರುವ 2002ರ ಸುಲಿಗೆ ಪ್ರಕರಣ ತೀರ್ಪನ್ನು ದೆಹಲಿಯ ಪಾಟಿಯಾಲಾ ಹೌಸ್ ನ್ಯಾಯಾಲಯವು ಮೇ 04 ರವರೆಗೆ ಮುಂದೂಡಿದೆ.

ನವದೆಹಲಿ: 1993 ರ ಮುಂಬಯಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಅಬು ಸಲೀಂ ಮೇಲಿರುವ 2002ರ ಸುಲಿಗೆ ಪ್ರಕರಣ ತೀರ್ಪನ್ನು ದೆಹಲಿಯ ಪಾಟಿಯಾಲಾ ಹೌಸ್ ನ್ಯಾಯಾಲಯವು ಮೇ 04 ರವರೆಗೆ ಮುಂದೂಡಿದೆ.
ಇಂದು ನಿಗದಿಯಾಗಿದ್ದ ತೀರ್ಪು ಪ್ರಕಟಣೆಯನ್ನು ಕಾರಣಾಂತರದಿಂದ ಒಂದು ವಾರದ ಮಟ್ಟಿಗೆ ಮುಂದೂಡಲಾಗಿದೆ.
ಏಪ್ರಿಲ್ 21ರಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದು (ಏ.28) ತೀರ್ಪು ಪ್ರಕಟಿಸುವುದಾಗಿ ಘೋಷಿಸಿತ್ತು. ಆದರೆ ಇಂದು ಮತ್ತೆ ತೀರ್ಪನ್ನು ಒಂದು ವಾರದ ಮಟ್ಟಿಗೆ ಮುಂದೂಡಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಸಲೀಂ ಬಗ್ಗೆ ಸೂಕ್ತ ಸಾಕ್ಷಾಧಾರಗಳಿಲ್ಲದ ಕಾರಣ ಫೆಬ್ರವರಿಯಲ್ಲಿ ಮತ್ತೆ ಹೊಸದಾಗಿ ವಿಚಾರಣೆಗೆ ಪ್ರಾರಂಭಿಸಲು ಫ್ರೆಶ್ ಪ್ರೊಡಕ್ಷನ್ ವಾರಂಟ್ ಹೊರಡಿಸಲಾಗಿತ್ತು.
ಸಧ್ಯ 2002 ರಲ್ಲಿ ದೆಹಲಿ ಉದ್ಯಮಿ ಅಶೋಕ್ ಗುಪ್ತಾ ಅವರಿಂದ  5 ಕೋಟಿ ರೂ.ಸುಲಿಗೆ ಮಾಡಿದ್ದ ಸಂಬಂಧ ಅಬು ಸಲೀಂ ತನಿಖೆ ಎದುರಿಸುತ್ತಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!