ನವದೆಹಲಿ: ಸರಾಸರಿ ಭಾರತೀಯರು ದಿನದ ಸುಮಾರು 200 ನಿಮಿಷ ಮೊಬೈಲ್ ಆ್ಯಪ್ ಗಳನ್ನು ನೋಡುತ್ತಾ ಸಮಯ ಕಳೆಯುತ್ತಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಅಭಿವೃದ್ಧಿ ಪತ್ರಿಕೋದ್ಯಮ ಕೋರ್ಸ್ ನ ಸಮಾಲೋಚನ ಸಮಾವೇಶದಲ್ಲಿ ಮಾತನಾಡಿದ ಅವರು, ಪತ್ರಕರ್ತರು ಬದಲಾಗುತ್ತಿದ್ದಾರೆ. ಸ್ವಲ್ಪವೇ ಸ್ವಲ್ಪ ಸುದ್ದಿ ನೀಡುತ್ತಾರೆ, ಸಂಪಾದಕರಲ್ಲೂ ಕೂಡ ಬದಲಾವಣೆಯಾಗಿದೆ ನಿರೂಪಣೆ. ಯ ಕೊನೆಯ ಪದ ಬದಲಾಗಿದೆ ಎಂದು ತಿಳಿಸಿದ್ದಾರೆ,
ಪ್ರಪಂಚದ ಪ್ರತಿಯೊಂದು ಮೂಲೆ ಮೂಲೆಯಲ್ಲಿಯೂ ಡಾಟಾ ಮಾಹಿತಿ ಸ್ಪೋಟಗೊಳ್ಳುತ್ತಿದೆ. ಇಲ್ಲಿ ವಿಶ್ವಾಸಾರ್ಹತೆ ಮುಖ್ಯ ಎಂದು ಹೇಳಿದ್ದಾರೆ.
ಗ್ರಾಮೀಣ ಪ್ರದೇಶಗಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಡಿಯೋ ಬಳಕೆಯಾಗುತ್ತಿದ್ದು, ಮುಂಬರು ದಿನಗಳಲ್ಲಿ ಇಉದರ ಬಳಕೆಯ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದರು.