ನಿಂತಿದ್ದ ಟ್ರಕ್ ಗೆ ವ್ಯಾನ್ ಡಿಕ್ಕಿ
ಉತ್ತರ ಪ್ರದೇಶ: ನಿಂತಿದ್ದ ಟ್ರಕ್ ಗೆ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಸಾವನ್ನಪ್ಪಿರುವ ಘಟನೆ ಲಕ್ಕಿಮ್‌ಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ.
ಕೆಲಸದ ನಿಮಿತ್ತ ವ್ಯಾನ್ ನಲ್ಲಿ 17 ಮಂದಿ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 24ರಲ್ಲಿ ಬೆಳಿಗ್ಗೆ 6 ಗಂಟೆಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟಾಟಾ ಮ್ಯಾಜಿಕ್ ವ್ಯಾನ್ ಚಾಲಕ ಅನೂಪ್ ಅವಸ್ಥಿ (25), ಕ್ಲಿನರ್ ಕೀಶನ್ (23) ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಗಾಯಾಳುಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಘಟನೆಗೆ ವೇಗದ ಚಾಲನೆಯೇ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಭೀಕರ ಅಪಘಾತದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು ಅಪಘಾತ ಸಂತ್ರಸ್ತರಿಗೆ ಸರ್ವ ರೀತಿಯಲ್ಲಿ ನೆರವಾಗುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಈ ದುರ್ಘಟನೆಯು ಉಚೌಲಿಯಾ ಎಂಬಲ್ಲಿ ನಡೆದಿದೆ. ಶಹಜಹಾನ್‌ಪುರದಿಂದ ಸೀತಾಪುರಕ್ಕೆ ಹೋಗುತ್ತಿದ್ದ ಓವರ್ ಲೋಡ್ ಆಗಿದ್ದ ಟಾಟಾ ಮ್ಯಾಜಿಕ್ ವ್ಯಾನ್, ರಸ್ತೆ ಬದಿಯ ಹೊಟೇಲೊಂದರ ಬಳಿ ನಿಲ್ಲಿಸಲಾಗಿದ್ದ ಟ್ರಕ್ಕಿಗೆ ಹಿಂಬದಿಯಿಂದ ಢಿಕ್ಕಿ ಹೊಡೆಯಿತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.