ಕಾನ್ಪುರ್: ಉತ್ತರ ಪ್ರದೇಶದ ಕಾನ್ಪುರ್ ದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ)ದ ಎಟಿಎಂನಲ್ಲೇ 2000 ರುಪಾಯಿ ಮುಖಬೆಲೆಯ ನಕಲಿ ಮತ್ತು ಹರಿದ ನೋಟುಗಳು ಬರುತ್ತಿವೆ.
ಶನಿವಾರ ಎಸ್ ಬಿಐ ಎಟಿಎಂನಲ್ಲಿ ಹಣ ಡ್ರಾ ಮಾಡಿದ ಪ್ರಶಾಂತ್ ಮೌರ್ಯ ಅವರ ಕೈಗೆ 2000 ರುಪಾಯಿ ಮುಖ ಬೆಲೆಯ ನಕಲಿ ನೋಟು ಹಾಗೂ ಆರು ಹರಿದ ನೋಟುಗಳು ಬಂದಿವೆ.
ನಾನು ತುರ್ತಾಗಿ ವೇತನ ನೀಡಬೇಕಾಗಿತ್ತು. ಆದರೆ ಹಣ ಡ್ರಾ ಮಾಡಿದಾಗ ನಕಲಿ ಮತ್ತು ಹರಿ ನೋಟುಗಳು ನನ್ನ ಕೈಗೆ ಬಂದಿವೆ ಎಂದು ಮೌರ್ಯ ತಮ್ಮ ಅಳಡು ತೋಡಿಕೊಂಡಿದ್ದಾರೆ.
ಈ ಸಂಬಂಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಟಿಎಂ ಬೀಗ ಹಾಕಿ, ಈ ನೋಟುಗಳ ಮೂಲ ಹುಡುಕಲು ತನಿಖೆ ನಡೆಸುತ್ತಿದ್ದಾರೆ.