ಕಾಶ್ಮೀರದಲ್ಲಿ 'ಬ್ಲ್ಯಾಕ್ ಕ್ಯಾಟ್' ಕಮಾಂಡೊಗಳ ನಿಯೋಜನೆಗೆ ಗೃಹ ಚಚಿವಾಲಯ ಚಿಂತನೆ
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ನಡೆಯುವ ಎನ್ ಕೌಂಟರ್ ಹಾಗೂ ಒತ್ತೆ ಪ್ರಕರಣಗಲಲ್ಲಿ ಭದ್ರತಾ ಪಡೆಗಳಿಗೆ ಸಹಕಾರಿಯಾಗಲು ಸೇನಾಪಡೆಯ ಉನ್ನತ ಶಕ್ತಿಯಾದ ಎನ್ಎಸ್ಜಿ 'ಬ್ಲ್ಯಾಕ್ ಕ್ಯಾಟ್' ಕಮಾಂಡೊಗಳನ್ನುಶೀಘ್ರದಲ್ಲೇ ನೇಮಕ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ರಾಷ್ಟ್ರೀಯ ಭದ್ರತಾ ಪಡೆ ಕಮಾಂಡೋಗಳನ್ನು ನಿಯೋಜಿಸುವ ಸಂಬಂಧ ಗೃಹ ಸಚಿವಾಲಯ ಪರಿಶೀಲನೆ ನದೆಸುತ್ತಿದೆ. ಇದರಿಂದಾಗಿ ಅವರು ಅವರು ಭಾರತೀಯ ಸೇನೆ, ಸಿಆರ್‌ಪಿಎಫ್ ಮತ್ತು ರಾಜ್ಯ ಪೊಲೀಸ್ ಪಡೆಗಳಿಗೆ ಸಹಕಾರ ನಿಡಬಹುದಾಗಿದೆ. ಹೆಚ್ಚಿನ ಪ್ರಮಾಣದ ಅಪಾಯಕಾರಿ ಉಗ್ರ ಚಟುವಟಿಕೆ ನಿಯಂತ್ರಣಕ್ಕೆ ಇದು ಸಹಕಾರಿಯಾಗಲಿದೆ.
"ನಾವು ಕಾಶ್ಮೀರದಲ್ಲಿ ಎನ್ಎಸ್ಜಿಯನ್ನು ನಿಯೋಜಿಸಲು ಯೋಜಿಸುತ್ತಿದ್ದೇವೆ, ಭಯೋತ್ಪಾದಕರ ಎನ್ ಕೌಂಟರ್ ಹಾಗೂ ಒತ್ತೆಯಾಳು ಪ್ರಕರಣದಂತಹಾ ಪರಿಸ್ಥಿತಿಗಳನ್ನು ಎದುರಿಸಲು ಅವರಿಗೆ ತರಬೇತಿ ನೀಡುತ್ತಿದ್ದೇವೆ.ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ಎಸ್ ಪಿ ವಯೀದ್ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದರು" ಅಧಿಕಾರಿಗಳು ಹೇಳಿದ್ದಾರೆ.
ಈ ಹಿಂದೆ ಸಹ ಕಣಿವೆಯಲ್ಲಿ ಸೈನ್ಯದ ಉನ್ನತ ದಲವಾದ ಕಮಾಂಡೋಗಳನ್ನು ಸೇವೆಗೆ ನಿಯೋಜಿಸಲಾಗಿತ್ತು. ಅವರ ವಿಶೇಷ ಕೌಶಲ್ಯಗಳಿಂದ ಒತ್ತೆಸೆರೆ ಪ್ರಕರಣ, ಗುಂಡಿನ ದಾಳಿಯತಹಾ ಘಟನೆಗಲನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು. ಈ ಸಂದರ್ಭ ಸಹ ಇದು ಯಶಸ್ವಿಯಾಗಲಿದೆ ಎಂದು ಭಾವಿಸಲಾಗುವುದು ಎಂದು ಅವರು ಹೇಳಿದ್ದಾರೆ.