ಪ್ರಧಾನ ಮಂತ್ರಿ ನರೇಂದ್ರ ಮೋದಿ 
ದೇಶ

ವಾರಣಾಸಿಯಲ್ಲಿ ಮುಂದಿನ ಪ್ರವಾಸಿ ದಿವಸ ಕಾರ್ಯಕ್ರಮ ಆಯೋಜನೆ

ಮುಂದಿನ ಪ್ರವಾಸಿ ಭಾರತೀಯ ದಿನವನ್ನು ಧಾರ್ಮಿಕ ನಗರಿ ವಾರಣಾಸಿಯಲ್ಲಿ ಮುಂದಿನ ಜನವರಿಯಲ್ಲಿ ...

ನವದೆಹಲಿ: ಮುಂದಿನ ಪ್ರವಾಸಿ ಭಾರತೀಯ ದಿನವನ್ನು ಧಾರ್ಮಿಕ ನಗರಿ ವಾರಣಾಸಿಯಲ್ಲಿ ಮುಂದಿನ ಜನವರಿಯಲ್ಲಿ ಆಯೋಜಿಸಲಾಗುವುದು, ಇಲ್ಲಿ ಭಾರತೀಯ ವಲಸಿಗರಿಗೆ ಕುಂಭ ಸ್ನಾನದಲ್ಲಿ ಭಾಗವಹಿಸುವ ಅವಕಾಶ ನೀಡಿ ನಂತರ ದೆಹಲಿಯಲ್ಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ವಾಷಿಂಗ್ಟನ್ ಡಿಸಿ, ಮೇರಿಲ್ಯಾಂಡ್ ಮತ್ತು ವರ್ಜಿನಿಯಾ ಸುತ್ತಮುತ್ತ ಭಾರತೀಯ ಅಮೆರಿಕಾ ಸಮುದಾಯದ ನಾಯಕರನ್ನುದ್ದೇಶಿಸಿ ಮಾತನಾಡಿದ ಭಾರತೀಯ ರಾಯಭಾರಿಗಳ ಸಮುದಾಯ ವ್ಯವಹಾರಗಳ ಸಚಿವ ಅನುರಾಗ್  ಕುಮಾರ್ ಭಾರತೀಯ ವಲಸಿಗರು ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.

ಮುಂದಿನ ಪ್ರವಾಸಿ ಭಾರತೀಯ ದಿವಸವನ್ನು ವಾರಣಾಸಿಯಲ್ಲಿ ಜನವರಿ 21ರಿಂದ 23ರವರಂಗೆಆಯೋಜಿಸಲಾಗುವುದು. ಇಲ್ಲಿಗೆ ಬಂದವರಿಗೆ ಅಲಹಾಬಾದಿನ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಮತ್ತು ಅಲ್ಲಿಂದ ದೆಹಲಿಗೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಕುಮಾರ್ ತಿಳಿಸಿದರು.

ಈ ವರ್ಷದ ಪ್ರವಾಸಿ ಭಾರತೀಯ ದಿವಸವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌಥ್ ಉದ್ಘಾಟಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

60 ದಿನಗಳ ಕದನ ವಿರಾಮ ವಿಸ್ತರಣೆಗೆ ಅಮೆರಿಕ, ಇರಾನ್ ಸಂಧಾನಕಾರರು ಒಪ್ಪಿಗೆ; ಟ್ರಂಪ್ ಅನುಮೋದನೆ ಬಾಕಿ

ಕರ್ನಾಟಕ ನಾಯಕತ್ವ ಬದಲಾವಣೆಯ ನಡುವೆ CM ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತೆ ದೆಹಲಿಗೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶನಿವಾರ; ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

ಕ್ರೇಜಿಸ್ಟಾರ್ ರವಿಚಂದ್ರನ್ ವಿರುದ್ಧವೇ ಅತ್ಯಾಚಾರ ಯತ್ನ ಆರೋಪ, ಮಾನನಷ್ಟ ಮೊಕದ್ದಮೆ: ಕಣ್ಣೀರಿಟ್ಟು ಕ್ಷಮೆ ಕೇಳಿದ 'ಹಳ್ಳಿಮೇಷ್ಟ್ರು' ನಟಿ Bindiya!

Karnataka CM News LIVE Updates | ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ; ಸಿಎಲ್‌ಪಿ ಸಭೆ ಶನಿವಾರ ಸಾಧ್ಯತೆ!

SCROLL FOR NEXT