ದೇಶ

ಕರ್ನಾಟಕ ಚುನಾವಣೆ ನಂತರ ಕೈಲಾಸ ಮಾನಸ ಸರೋವರ ಯಾತ್ರೆ: ರಾಹುಲ್ ಗಾಂಧಿ

Shilpa D
ನವದೆಹಲಿ: ಕರ್ನಾಟಕ ವಿಧಾನ ಸಭೆ ಚುನಾವಣೆ ನಂತರ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಜನಾಕ್ರೋಶ ರ‍್ಯಾಲಿ'ಯಲ್ಲಿ ಮಾತನಾಡಿದ ಅವರು, 'ಎರಡು ಮೂರು ದಿನಗಳ ಹಿಂದಷ್ಟೇ ನಾವು ಕರ್ನಾಟಕದಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆವು. 8000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನ ಇದ್ದಕ್ಕಿದ್ದಂತೆ ತಾಂತ್ರಿಕ ದೋಷದಿಂದ  ವಿಮಾನ ನೆಲದತ್ತ ಧಾವಿಸತೊಡಗಿತು. 'ಕಥೆ ಮುಗೀತು' ಎಂದೇ ನಾನು ಭಾವಿಸಿದೆ. ಅದೃಷ್ಟವಶಾತ್‌ ಏನೂ ಅಪಾಯ ಸಂಭವಿಸಿಲ್ಲ. ಆ ಕ್ಷಣವೇ ನನ್ನ ಮನಸ್ಸಲ್ಲಿ ಕೈಲಾಸ ಮಾನ ಸರೋವರ ಯಾತ್ರೆ ಮಾಡಬೇಕೆಂಬ ಯೋಚನೆ ಬಂತು. ಇದು ನನ್ನ ಹೃದಯದಿಂದ ಮೂಡಿದ ಬಯಕೆ. ಅದನ್ನೇ ನಿಮ್ಮೆದುರು ಹೇಳಿಕೊಳ್ಳುತ್ತಿದ್ದೇನೆ' ಎಂದು ತಿಳಿಸಿದರು. 
ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಖಚಿತ ಎಂದು ಹೇಳಿಕೊಂಡಿರುವ ರಾಹುಲ್‌, ಚುನಾವಣೆ ಪ್ರಕ್ರಿಯೆಗಳು ಮುಗಿದ ಕೂಡಲೇ 15 ದಿನಗಳ ಕಾಲ ತೀರ್ಥಯಾತ್ರೆ ಕೈಗೊಳ್ಳುವುದಾಗಿ ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅನುಮತಿ ನೀಡಬೇಕೆಂದು ಕೋರಿದ್ದಾರೆ. 
SCROLL FOR NEXT