ಶಹಜಾನಪುರ: ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ವರ ಮದುವೆ ಸಂಭ್ರಮಾಚರಣೆ ವೇಳೆ ಗಾಳಿಯಲ್ಲಿ ಹಾರಿಸಿದ ಗುಂಡು ತಗುಲಿ ಮಸಣ ಸೇರಿಸುವ ಹೃದಯ ವಿದ್ರಾವಕ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಲಕ್ಮೀಪುರ ಖೇರಿ ಜಿಲ್ಲೆಯ ರಾಮ್ಪುರ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮದುವೆ ಸಂಬಂಧ ವರ ಪೂಜಾ ಕೈಂಕರ್ಯದಲ್ಲಿ ತೊಡಗಿದ್ದಾಗ ರಾಮಚಂದ್ರ ಎಂಬಾತ ಹಾರಿಸಿದ ಗುಂಡು ವರ ಸುನೀಲ್ ವರ್ಮಾನ ಎದೆಗೆ ತಗುಲಿದೆ. ಕೂಡಲೇ ಆತ ಅಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾನೆ.
ಈ ಸಂಬಂಧ ಪೊಲೀಸರು ರಾಮಚಂದ್ರ ವಿರುದ್ಧ ಸೆಕ್ಷನ್ 302(ಕೊಲೆ)ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ರಾಮಚಂದ್ರ ಸುನೀಲ್ ವರ್ಮಾನ ಆಪ್ತ ಸ್ನೇಹಿತನಾಗಿದ್ದು ಸದ್ಯ ಪ್ರಕರಣ ನಂತರ ಆತ ತಲೆ ಮರೆಸಿಕೊಂಡಿದ್ದಾನೆ.
ರಾಮಚಂದ್ರ ಹಾರಿಸಿದ ಗುಂಡು ಸುನೀಲ್ ವರ್ಮಾನ ಎದೆಗೆ ಬಿದ್ದು ಆತ ಮೃತಪಟ್ಟಿರುವ ಸಂಪೂರ್ಣ ದೃಶ್ಯಗಳು ಸೆರೆಯಾಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.