ಇದು ಭಾರತೀಯ ವಿಮಾನದ ಡರ್ಟಿ ಪಿಕ್ಚರ್: ಕೇಳಿದರೆ ಹುಬ್ಬೇರಿಸುತ್ತೀರಿ!
ನವದೆಹಲಿ: ಈ ವಿಷಯ ಕೇಳಿದರೆ ವಿಮಾನ ಪ್ರಯಾಣಿಕರು ಭಯಪಡುತ್ತೀರಿ, ಮೊದಲು ವಿಷಯ ಏನು ಅಂದ್ರೆ, ವಿಮಾನ ಚಾಲನೆ ಮಾಡುವ ಪೈಲಟ್ ಗಳು ಮದ್ಯಪಾನ ಮಾಡಿರುವ ಬರೊಬ್ಬರಿ 130 ಪ್ರಕರಣಗಳು ವರದಿಯಾಗಿವೆ.
ವಿಮಾನಯಾನ ಸಂಸ್ಥೆಗಳು ಪೈಲಟ್ ಗಳ ವರ್ತನೆಗಳಿಗೆ ಕಡಿವಾಣ ಹಾಕುವುದಕ್ಕೆ ಸಾಕಷ್ಟು ಕ್ರಮ ಕೈಗೊಂಡಿದ್ದರೂ ಸಹ ಯಾವುದೇ ಉಪಯೋಗವಾಗಿಲ್ಲ ಎಂಬುದು ಪ್ರಕರಣಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗದೇ ಇರುವುದರಿಂದ ಸ್ಪಷ್ಟವಾಗಿದೆ.
ನಾಗರಿಕ ವಿಮಾನಯಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಪ್ರೀ-ಫ್ಲೈಟ್ ಪರೀಕ್ಷೆಯಲ್ಲಿ 132 ಪೈಲಟ್ ಗಳು ಮದ್ಯಪಾನ ಮಾಡಿರುವುದು ಕಂಡುಬಂದಿದೆ. 2015 ರಲ್ಲಿ 43 ಪೈಲಟ್ ಗಳು, 2016 ರಲ್ಲಿ 44 2017 ರಲ್ಲಿ 45 ಪ್ರಕರಣಗಳು ವರದಿಯಾಗಿದೆ. ರೂಲ್ 24 ರ ಪ್ರಕಾರ ವಿಮಾನ ಚಾಲನೆ ಮಾಡುವುದಕ್ಕೂ 12 ಗಂಟೆಗಳ ಮುನ್ನ ಮದ್ಯ ಸೇವನೆಯನ್ನು ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೇ ವಿಮಾನ ಚಾಲನೆ ಮಾಡುವುದಕ್ಕೂ ಮುನ್ನ ಪೈಲಟ್ ಗಳಿಗೆ ಮದ್ಯ ಸೇವನೆ ತಪಾಸಣೆ ಮಾಡಲಾಗುತ್ತದೆ. ಆದರೆ ಇದ್ಯಾವುದಕ್ಕೂ ಜಗ್ಗದ ಪೈಲಟ್ ಗಳು ಮದ್ಯಸೇವನೆ ಮಾಡಿ ಪದೇ ಪದೇ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ.
ನಿಯಮ ಉಲ್ಲಂಘನೆ ಮಾಡಿದ್ದ ಪೈಲಟ್ ಗಳ ಪರವಾನಗಿಯನ್ನು ರದ್ದುಗೊಳಿಸಿ, ಮೂರು ತಿಂಗಳು ಅಮಾನತು ಮಾಡಲಾಗಿತ್ತು ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.